ಪುತ್ತೂರು: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿ, ಪುತ್ತೂರು ತಾಲೂಕು ಆಡಳಿತ ಮತ್ತು ಪುತ್ತೂರು ನಗರಸಭೆ ಇದರ ವತಿಯಿಂದ ಎ.15ರಂದು ವಾಹನ ಜಾಥಾ ನಡೆಯಿತು.
ದರ್ಬೆ ವೃತ್ತದಿಂದ ಹೊರಟ ವಾಹನ ಜಾಥಾವು ಮುಖ್ಯರಸ್ತೆಯ ಮೂಲಕ ಸಾಗಿ ಕಿಲ್ಲೆ ಮೈದಾನದ ತನಕ ಸಾಗಿತು.
ಪೌರಾಯುಕ್ತ ಬದ್ರುದ್ದೀನ್ ಸೌದಾಗರ್, ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
