





ಪುತ್ತೂರು:ಏ.26ರಂದು ನಡೆಯಲಿರುವ ದ.ಕ.ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಯಲ್ಲೇ ಮತದಾನ ಪ್ರಕ್ರಿಯೆ ಬಯಸಿ ಅರ್ಜಿ ಸಲ್ಲಿಸಿರುವ 85 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ಮತು ವಿಶೇಷ ಚೇತನರಿಗೆ ಮನೆ ಮನೆ ಮತದಾನ ಪ್ರಕ್ರಿಯೆಯಲ್ಲಿ ಏ.15,16ರಂದು ಶೇ.95.2 ಮತದಾನ ನಡೆದಿದೆ.ಶೇ.5ರಷ್ಟು ಮಾತ್ರ ಬಾಕಿಯಿದ್ದು ಕೊನೆ ದಿನವಾಗಿರುವ ಏ.17ರಂದು ಮಧ್ಯಾಹ್ನದೊಳಗೆ ಇದನ್ನು ಪೂರ್ಣಗೊಳಿಸಲಾಗುವುದು ಎಂದು ದ.ಕ.ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ.


ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 787 ಮಂದಿ 85 ವರ್ಷ ಮೇಲ್ಪಟ್ಟವರು ಹಾಗೂ 340 ಮಂದಿ ವಿಶೇಷ ಚೇತನರು ಸೇರಿದಂತೆ ಒಟ್ಟು 1127 ಮತದಾರರು ಮನೆಯಲ್ಲೇ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದು ಅವರಿಗೆ ಏ.15ರಂದು ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಏ.16ರಂದೂ ನಡೆದಿದೆ.ಏ.17ರಂದು ಮತದಾನ ಪ್ರಕ್ರಿಯೆ ಕೊನೆಗೊಳ್ಳಲಿದೆ.ಲೋಕಸಭಾ ಚುನಾವಣೆಯಲ್ಲಿ ಸ್ಪಽಸುತ್ತಿರುವ ಅಭ್ಯರ್ಥಿಗಳ ಏಜೆಂಟರೊಂದಿಗೆ, ಚುನಾವಣಾ ಆಯೋಗದಿಂದ ನಿಯೋಜಿತ ಅಧಿಕಾರಿಗಳ ತಂಡ ಈ ಮತದಾರರ ಮನೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ನಡೆಸಿದೆ.ಮೊದಲ ದಿನಕ್ಕೆ ನೋಂದಾಯಿಸಿಕೊಂಡಿದ್ದ ಮತದಾರರ ಪೈಕಿ ನಾಲ್ಕು ಮಂದಿ ಮೃತರಾಗಿದ್ದರು.





20ತಂಡಗಳಲ್ಲಿ ಭೇಟಿ
ಮತದಾರರ ಭೇಟಿಗಾಗಿ ಆಯೋಗವು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 20 ಸೆಕ್ಟರ್‌ಗಳಲ್ಲಿ 20 ಮಾರ್ಗಗಳನ್ನು ರೂಪಿಸಿದೆ.ಮನೆ ಮನೆ ಭೇಟಿಯು ಬೆಳಿಗ್ಗೆ 8ರಿಂದ ಪ್ರಾರಂಭಗೊಂಡು ಸಂಜೆಯ ತನಕ ನಡೆಯುತ್ತಿದೆ.20 ಸೆಕ್ಟರ್‌ಗಳಲ್ಲಿ ಈಗಾಗಲೇ 16 ಸೆಕ್ಟರ್‌ಗಳು ಪೂರ್ಣಗೊಂಡಿದ್ದು ನಾಲ್ಕು ಸೆಕ್ಟರ್‌ಗಳಲ್ಲಿ ಏ.17ರಂದು ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಮನೆ ಮನೆ ಭೇಟಿ ನೀಡುವ ಪ್ರತಿ ತಂಡದಲ್ಲಿ ಅಧ್ಯಕ್ಷ ಅಽಕಾರಿ, ಸಹಾಯಕ ಅಧ್ಯಕ್ಷ ಅಧಿಕಾರಿ, ಡಿ ಗ್ರೂಪ್, ಇಬ್ಬರು ಸೂಕ್ಷ್ಮ ವೀಕ್ಷಕರು, ವಿಡಿಯೋಗ್ರಾಫರ್, ಪೊಲೀಸ್ ಸಿಬ್ಬಂದಿ, ಬೂತ್ ಮಟ್ಟದ ಅಧಿಕಾರಿ ಮತ್ತು ಸ್ಪರ್ಧಿಸುವ ಅಭ್ಯರ್ಥಿಗಳ ಏಜೆಂಟರು ಜೊತೆಗೆ ಇರುತ್ತಾರೆ









