ಪುತ್ತೂರು: ಕುಂಬ್ರ ಮೆಸ್ಕಾಂ ಗ್ರಾಮಾಂತರ ಉಪವಿಭಾಗ ಕಛೇರಿಯಲ್ಲಿ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಬಿಲ್ ಸ್ವೀಕೃತಿ ಯಂತ್ರ (ಎಟಿಪಿ ಮೆಷಿನ್) ಅನ್ನು ಕೆಲವೊಂದು ಕಾರಣಗಳಿಂದ ಕಳೆದ ಕೆಲವು ದಿನಗಳಿಂದ ಬಂದ್ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಕುಂಬ್ರ ವರ್ತಕರ ಸಂಘವು ಏ.2ರಂದು ಮೆಸ್ಕಾಂ ಕಛೇರಿಗೆ ತೆರಳಿ ಎಟಿಪಿ ಮೆಷಿನ್ ಅನ್ನು ಬಂದ್ ಮಾಡಬಾರದು ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತದೆ. ಕೂಡಲೇ ವಿದ್ಯುತ್ ಬಿಲ್ ಸ್ವೀಕೃತಿ ಯಂತ್ರವನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಹೆಚ್ ಶಿವಶಂಕರ್‌ರವರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಿವಶಂಕರ್‌ರವರು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದರು. ಅದರಂತೆ ಏ.17ರಿಂದ ವಿದ್ಯುತ್ ಬಿಲ್ ಸ್ವೀಕೃತಿ ಯಂತ್ರ ಮತ್ತೆ ಕಾರ್ಯಾರಂಭ ಮಾಡಿದೆ. ಈ ಬಗ್ಗೆ ಮೆಸ್ಕಾಂ ಕಛೇರಿಗೆ ತೆರಳಿದ್ದ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಸ್ಥಾಪಕ ಶ್ಯಾಮಸುಂದರ ರೈ ಕೊಪ್ಪಳ, ಪ್ರ.ಕಾರ್ಯದರ್ಶಿ ಭವ್ಯ ರೈ, ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋರವರುಗಳು ಮೆಸ್ಕಾಂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.