ಈಶ್ವರಮಂಗಲ ಹನುಮಗಿರಿಯಲ್ಲಿ ಶ್ರೀ ರಾಮನವಮಿ-ನವಕಲಶಾಭಿಷೇಕ

0

ಈಶ್ವರಮಂಗಲ: ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಶ್ರೀರಾಮನವಮಿಯ ಪ್ರಯುಕ್ತ ರಾಮನವಮಿ ಆಚರಿಸಲಾಯಿತು. ನವಕಲಶಾಭಿಷೇಕ, ಮಹಾಪೂಜೆ, ರಾತ್ರಿ ಸಿಂಧೂರ, ಕುಂಕುಮ, ಶ್ರೀಗಂಧ, ರಕ್ತ ಚಂದನ, ಸಿಯಾಳ, ಹಾಲು, ಪುಷ್ಪ, ಜೇನುತುಪ್ಪ, ಅರಸಿನದಿಂದ ಅಭಿಷೇಕ ಮಾಡಲಾಯಿತು.

ಧಾರ್ಮಿಕ ಕಾರ್ಯಕ್ರಮವನ್ನು ಗುರುತಂತ್ರಿ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಯುತ್ತ ಮೂಡೆತ್ತಾಯ, ಧರ್ಮದರ್ಶಿಗಳಾದ ಶಿವರಾಂ ಪಿ, ಶಿವರಾಂ ಶರ್ಮ, ನಾಗರಾಜ್ ನಡುವಡ್ಕ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು. ಚಾರ್ವಾಕ ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆಯಿತು.

LEAVE A REPLY

Please enter your comment!
Please enter your name here