ಪುತ್ತೂರು: ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ನವೀಕೃತ ತರವಾಡು ಮನೆಯ ಗೃಹಪ್ರವೇಶ, ಧಮಘದೈವ ಪಿಲಿಭೂತದ ನೂತನ ದೈವಸ್ಥಾನ, ನವೀಕೃತಗೊಂಡ ಉತ್ಸವ ಕಟ್ಟೆಗಳು ಹಾಗೂ ಗುಳಿಗನ ಕಟ್ಟೆಯ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ನೇಮೊತ್ಸವ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಎ.21ರಿಂದ 24ರ ತನಕ ನಡೆಯಲಿದೆ.
ಎ.21ರಂದು ಸಂಜೆ ಪುಣ್ಯಾಹ ವಾಚನ, ಸ್ಥಳಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ತರವಾಡು ಮನೆ ಗೃಹಪ್ರವೇಶ, ದೈವಗಳ ಪ್ರತಿಷ್ಠೆ:
ಎ.22ರಂದು ಬೆಳಿಗ್ಗೆ 6ರಿಂದ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಬೆಳಿಗ್ಗೆ 8.32ರ ವೃಷಭ ಲಗ್ನ ಸಮುಹೂರ್ತದಲ್ಲಿ ನೂತನ ತರವಾಡು ಮನೆಯ ಗೃಹಪ್ರವೇಶ, 9.40ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಶ್ರೀಸತ್ಯನಾರಾಯಣ ದೇವರ ಪೂಜೆ, ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ 3ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ದುರ್ಗಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಧರ್ಮದೈವದ ಭಂಡಾರ ಆಗಮನ, ನೇಮ:
ಎ.23ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ವೆಂಕಟರಮಣ ದೇವರ ಹರಿಸೇವೆ, ಮುಡಿಪು ಶುದ್ಧಿ, ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ಸಂಜೆ ಅರಿಯಡ್ಕ ಧರ್ಮದೈವ ಪಿಲಿಭೂತದ ಭಂಡಾರ ನೂತನ ದೈವಸ್ಥಾನದಿಂದ ಬಂದು ಅರಿಯಡ್ಕ ಏಳ್ನಾಡುಗುತ್ತಿನ ಧರ್ಮಚಾವಡಿಯಲ್ಲಿ ಏರುವುದು, ಶಿರಾಡಿ ದೈವದ ಭಂಡಾರ ಬಂದು ಅರಿಯಡ್ಕ ಮಂಟಮೆಯಲ್ಲಿ ಏರುವುದು, ಗ್ರಾಮದೈವ ಧೂಮಾವತಿಯ ಭಂಡಾರ ಕುತ್ಯಾಡಿ ಸ್ಥಾನದಿಂದ ಬಂದು ಅರಿಯಡ್ಕ ಮಂಟಮೆಯಲ್ಲಿ ಏರುವುದು. ರಾತ್ರಿ 2ರಿಂದ ಧರ್ಮದೈವ ಪಿಲಿಭೂತದ ನೇಮ ಆರಂಭ ಮತ್ತು ಗುರುಕಾರ್ನವರಿಗೆ ಬಡಿಸುವುದು. ಎ.24ರಂದು ಪ್ರಾತಃಕಾಲ 5ರಿಂದ ಪ್ರಸಾದ ವಿತರಣೆ, ಪರಿವಾರ ದೈವಗಳ ನೇಮೋತ್ಸವ, 7ರಿಂದ ಧರ್ಮದೈವದ ಭಂಡಾರ ಸ್ವಸ್ಥಾನಕ್ಕೆ ನಿರ್ಗಮನ, 8.30ರಿಂದ ಶಿರಾಡಿ ದೈವದ ನೇಮ, ಪ್ರಸಾದ ವಿತರಣೆ, ಗ್ರಾಮದೈವ ಧೂಮಾವತಿ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ ಶಿರಾಡಿ ಮತ್ತು ಧೂಮಾವತಿ ದೈವಗಳ ಭಂಡಾರ ಸ್ವಸ್ಥಾನಕ್ಕೆ ನಿರ್ಗಮನ, ರಾತ್ರಿ ಅರಿಯಡ್ಕ ಮನೆಯ ಕಲ್ಲುರ್ಟಿ ಸ್ಥಾನದಲ್ಲಿ ಕಲ್ಲುರ್ಟಿ, ಕೊರತ್ತಿ, ಗುಳಿಗ ಇತ್ಯಾದಿ ದೈವಗಳಿಗೆ ನೇಮ ಅನ್ನಸಂತರ್ಪಣೆ ನಡೆಯಲಿದೆ.