ಮತ್ತೆ ಜಿಲ್ಲೆಯ 33 ಮಂದಿಗೆ ಆಯುಧ ಠೇವಣಿಯಿಂದ ವಿನಾಯಿತಿ

0

ಸ್ಕ್ರೀನಿಂಗ್ ಸಮಿತಿ ಆದೇಶ – ದಾವೆ ಹೂಡಿದ್ದ ರೈತರಿಗೆ ಹೈಕೋರ್ಟ್‌ನಲ್ಲಿ ಜಯ

ನೆಲ್ಯಾಡಿ: ಚುನಾವಣೆ ಸಂದರ್ಭದಲ್ಲಿ ಕೋವಿ ಠೇವಣಿಯಿಂದ ರಿಯಾಯಿತಿ ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ದ.ಕ.ಜಿಲ್ಲೆಯ 33 ಮಂದಿಗೆ ಕೋವಿ ಠೇವಣಾತಿಯಿಂದ ವಿನಾಯಿತಿ ನೀಡಿ ದ.ಕ.ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿ ಎ.24ರಂದು ಆದೇಶ ನೀಡಿದೆ. ಈ ಹಿಂದೆ ಹೈಕೋರ್ಟ್ ಮೊರೆ ಹೋಗಿದ್ದ ಜಿಲ್ಲೆಯ 196 ಮಂದಿಗೆ ಕೋವಿ ಠೇವಣಾತಿಯಿಂದ ವಿನಾಯಿತಿ ನೀಡಲಾಗಿತ್ತು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚುನಾವಣೆಯ ಅವಧಿಯಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಎಲ್ಲಾ ಆಯುಧ ಪರವಾನಿಗೆದಾರರಿಗೆ ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಸಮೀಪದ ಪೊಲೀಸ್ ಠಾಣೆ ಅಥವಾ ಅಧಿಕೃತ ಕೋವಿ ಮುದ್ದುಗುಂಡು ವ್ಯಾಪಾರಿಗಳಲ್ಲಿ ಠೇವಣಿ ಇಡುವಂತೆ ಆದೇಶ ಹೊರಡಿಸಲಾಗಿತ್ತು. ಈ ಮಧ್ಯೆ ವಾಸ್ತವ್ಯದ ಮನೆಗಳು ರಿಮೋಟ್ ಲೋಕೇಶ್‌ನಲ್ಲಿದ್ದು ಹಾಗೂ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುವುದರಿಂದ ಆಯುಧ ಠೇವಣಿಯಿಂದ ವಿನಾಯಿತಿ ನೀಡುವಂತೆ ಕೋರಿ 33 ಮಂದಿ ಕೃಷಿಕರು ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ದಾವೆ ಹೂಡಿದ್ದ 33 ಮಂದಿಗೆ ಹೈಕೋರ್ಟ್ ನಲ್ಲಿ ಜಯ ಲಭಿಸಿದ್ದು, ಇದೀಗ ಕೋವಿ ಠೇವಣಿಯಿಂದ ವಿನಾಯಿತಿ ನೀಡಿ ದ.ಕ.ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿ ಆದೇಶ ನೀಡಿದೆ. ಹೈಕೋರ್ಟ್ ನಲ್ಲಿ ಕೃಷಿಕರ ಪರ ನ್ಯಾಯವಾದಿಗಳಾದ ಪ್ರದೀಪ್ ಹಾಗೂ ವೆಂಕಪ್ಪ ಗೌಡ ಅವರು ವಾದಿಸಿದ್ದರು.

ರಿಯಾಯಿತಿ ಪಡೆದವರು:
ಕಡಬ ತಾಲೂಕಿನ ದಾಮೋದರ ಪಿ.ಪುಚ್ಚೇರಿ ನೆಲ್ಯಾಡಿ, ಯೋಗೀಶ್‌ಕುಮಾರ್ ಪಂಜೋಡಿ, ಪುತ್ತೂರು ತಾಲೂಕಿನ ಅಂಕಿತ್ ರೈ ಕೆ.ಕೆದಂಬಾಡಿ, ಪುಷ್ಪರಾಜ್ ಅರಿಯಡ್ಕ, ಪಿ.ವಸಂತ ಗೌಡ ಬಜತ್ತೂರು, ಸುಧಾಕರ ನಾಮಾರು ಮೊಗ್ರು ಸಹಿತ ಬೆಳ್ತಂಗಡಿ, ಸುಳ್ಯ ತಾಲೂಕಿನ 33 ಮಂದಿಗೆ ಆಯುಧ ಠೇವಣಿಯಿಂದ ರಿಯಾಯಿತಿ ಸಿಕ್ಕಿದೆ.

LEAVE A REPLY

Please enter your comment!
Please enter your name here