ಕಲ್ಲಾರೆ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ `ಶಿವಕೃಪಾ ಸಭಾಭವನ’-ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಶ್ರೀಗಳಿಂದ ಲೋಕಾರ್ಪಣೆ

0

ಪುತ್ತೂರು:ಜೀವನದಲ್ಲಿ ವ್ಯವಹಾರಿಕ ಜೀವನದೊಂದಿಗೆ ಧಾರ್ಮಿಕ ಜೀವನ ಅತ್ಯಂತ ಅವಶ್ಯವಾದದು.ಮನುಷ್ಯನಾದವನಿಗೆ ಜೀವನ ನಡೆಸುವುದು ಮಾತ್ರ ಸಾಕಾಗುವುದಿಲ್ಲ.ಜೀವನ ಸಾರ್ಥಕತೆಯೂ ಇರಬೇಕು. ಅಂತಹ ಜೀವನ ಸಾರ್ಥಕತೆ ಧರ್ಮಾಚರಣೆಯ ಮೂಲಕ ಆಗುತ್ತದೆ ಎಂದು ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ನುಡಿದರು.

ಪುತ್ತೂರಿನ ಶಿವಬ್ರಾಹ್ಮಣ (ಸ್ಥಾನಿಕ) ಸಮಾಜ ಸೇವಾ ಸಂಘದ ವತಿಯಿಂದ, ಕಲ್ಲಾರೆಯಲ್ಲಿರುವ ಸಂಘದ ನಿವೇಶನದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ `ಶಿವಕೃಪಾ’ ಸಭಾಭವನವನ್ನು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.ಜೀವನದಲ್ಲಿ ವ್ಯಾವಹಾರಿಕ ಜೀವನದೊಂದಿಗೆ ಧಾರ್ಮಿಕ ಜೀವನ ಅತ್ಯಂತ ಅವಶ್ಯವಾದದು.ಅದು ಜೀವನದ ಸಾರ್ಥಕತೆಯನ್ನು ತೋರಿಸುತ್ತದೆ.ಮನುಷ್ಯನಾದವನಿಗೆ ವಿವೇಕ ಇದೆ.ಅದಕ್ಕೆ ಅಧ್ಯಯನ ಮುಖ್ಯ.ಧರ್ಮಾಚರಣೆ ಮಾಡುವುದು ಪುಣ್ಯ ಸಂಪಾದನೆ ಮಾಡಿದಂತೆ.ಇAತಹ ಪುಣ್ಯವನ್ನು ಇನ್ನೊಂದು ಜನ್ಮಕ್ಕೆ ಹೋಗುವಾಗ ಮಾತ್ರ ಕೊಂಡು ಹೋಗಲು ಸಾಧ್ಯವಿದೆ.ಹೀಗೆ ಪುಣ್ಯ ಕಾರ್ಯ ಮಾಡುತ್ತಾ ಹೋದರೆ ನಂತರ ಪರಿಪೂರ್ಣ ಶ್ರೇಯಸ್ಸು ಲಭಿಸುತ್ತದೆ ಮತ್ತು ಸಂಸಾರದಿAದ ಮುಕ್ತರಾಗಲು ಸಾಧ್ಯ ಹಾಗು ಶಾಶ್ವತವಾದ ಮೋಕ್ಷ ಪಡೆಯಲು ಸಾಧ್ಯ.ಇಂತಹ ಪುಣ್ಯ ಸಂಪಾದನೆ ಮಾಡಲು ಭಗವಂತನ ಸೇವೆ, ಗುರುಸೇವೆ, ಸಮಾಜ ಸೇವೆ ಮಾಡುವುದು ಅಗತ್ಯ ಎಂದ ಶ್ರೀಗಳು,ಧರ್ಮಾಚರಣೆ ಪ್ರತಿಯೊಬ್ಬ ಮನುಷ್ಯನಲ್ಲೂ ಇರಬೇಕು.ಇದನ್ನು ಜಗತ್ತಿಗೆ ಉಪದೇಶ ಮಾಡಲು ಆದಿ ಶಂಕರಾಚಾರ್ಯರು 1800 ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಅವತಾರ ಮಾಡಿ ಧರ್ಮ ಮಾರ್ಗವನ್ನು ಉಪದೇಶ ಮಾಡಿದ್ದಾರೆ.ಅವರು ಮಾಡಿದ ಲೋಕಾನುಗ್ರಹ ಕಾರ್ಯದಲ್ಲಿ ಪೀಠಗಳನ್ನು ಸ್ಥಾಪಿಸಿದರು.ಅದರಲ್ಲಿ ಶೃಂಗೇರಿ ಶಾರದಾ ಪೀಠವೂ ವಿರಾಜಮಾನವಾಗಿದೆ. ಈ ಪೀಠದ ಪರಂಪರೆಯಾಗಿ ಶಿಷ್ಯರಾಗಿರುವವರು ಶಿವಬ್ರಾಹ್ಮಣ(ಸ್ಥಾನಿಕ) ಬ್ರಾಹ್ಮಣ ಸಮಾಜದವರು.ಇವರೆಲ್ಲರೂ ಹಿಂದಿನಿಂದಲೂ ಪರಂಪರೆಯಾಗಿ ಇದರ ಶಿಷ್ಯ ಸಮಾಜದವರಾಗಿದ್ದು, ಪ್ರತಿ ವರ್ಷವೂ ಶೃಂಗೇರಿಗೆ ಆಗಮಿಸಿ ಗುರುಗಳ ವಿಶೇಷವಾದ ಅನುಗ್ರಹ ಪಡೆಯುತ್ತಾ ಬಂದಿದ್ದಾರೆ.ಇದು ಅತ್ಯಂತ ಸಂತೋಷ ವಿಷಯ. ಇವರು ಧಾರ್ಮಿಕದ ಜೊತೆಗೆ ಲೌಕಿಕವಾದ ವಿಶೇಷ ಸಾಧನೆ ಮಾಡಿದ್ದಾರೆ. ಇಂತಹ ಧರ್ಮಾಚರಣೆಯನ್ನು ನಿರಂತರವಾಗಿ ಮುಂದುವರಿಸಿ ಎಂದರು.

ಸಾರ್ವಜನಿಕ ಕಾರ್ಯಕ್ರಮಕ್ಕೆ ಒಪ್ಪಿಸಲಿದ್ದೇವೆ:
ಶಿವಬ್ರಾಹ್ಮಣ(ಸ್ಥಾನಿಕ) ಸಮಾಜ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್ ಅವರು ಮಾತನಾಡಿ ಸಭಾಭವನ ಶ್ರೀಗಳಿಂದ ಲೋಕಾರ್ಪಣೆಯಾಗಿದೆ. ಮುಂದೆ ಈ ಸಭಾಭನದಲ್ಲಿ ಮದುವೆ ಇತರ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ.ಇನ್ನು ಸ್ವಲ್ಪ ಕೆಲಸ ಇಲ್ಲಿ ಬಾಕಿ ಇದೆ.ಪಾಕಶಾಲೆ ಆಗಿದೆ.ಊಟದ ಹಾಲ್ ಆಗಬೇಕಾಗಿದೆ. ಇದು ಪೂರ್ಣ ಆದ ಕೂಡಲೇ ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಒಪ್ಪಿಸಲಿದ್ದೇವೆ ಎಂದರು.

ಗುರುಗಳ ಆಶೀರ್ವಾದದಿಂದ 3 ತಿಂಗಳಲ್ಲಿ ನಿರ್ಮಾಣ:
ಶಿವಬ್ರಾಹ್ಮಣ(ಸ್ಥಾನಿಕ) ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಶೃಂಗೇರಿ ಪೀಠದ ಭಕ್ತರಾಗಿ ಮುಂದುವರಿದ ನಮಗೆ ನಮ್ಮ ಸಮಾಜಕ್ಕೆ ಸಾಕಷ್ಟು ಏಳಿಗೆಗಳಾಗಿದೆ. ಸಂಘದ ಸ್ಥಾಪನೆಯಾಗಿ 88 ವರ್ಷದಲ್ಲಿ ಸೇವಾ ದಾಖಲೆ ಹೊಂದಿದೆ.ಸಮಾಜದ ಹಲವಾರು ಹಿರಿಯರ ಮಾರ್ಗದರ್ಶನ ಸೇವೆ 3ನೇ ತಲೆಮಾರಿಗೆ ಆದರ್ಶವಾಗಿದೆ. ಹಲವು ಸಮಾಜದ ಸೇವಾ ಚಟುವಟಿಕೆ ಜೊತೆಗೆ 50ಕ್ಕೂ ಹೆಚ್ಚು ಮಂದಿ ಸ್ಥಾಪಿಸಿದ ವಿದ್ಯಾನಿಧಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪಾರಂಪರಿಕ ಉತ್ಸವ ಆಚರಣೆ, ಚಾತುರ್ಮಾಸ್ಯ ಸಂದರ್ಭದಲ್ಲಿ ಗುರುಗಳ ಭೇಟಿ, ಗುರುವಂದನೆ, ಶ್ರೀ ಶಂಕರ ಜಯಂತಿ ಉತ್ಸವ, ಸಹಿತ ಹಲವಾರು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡಿಕೊಂಡು ಸಮಾಜ ಮುಂದುವರಿದಿದೆ.ಇವತ್ತು ನಮ್ಮ ನಿವೇಶನದ ಪ್ರಥಮ ಅಂತಸ್ತಿನ ಕಟ್ಟಡದಲ್ಲಿ 8 ಸಾವಿರ ಚದರ ವಿಸ್ತೀರ್ಣದ ಪೂರ್ಣ ಪ್ರಮಾಣದ ಸಭಾಭವನ ಲೋಕಾರ್ಪಣೆಯಾಗಿದೆ.ಈ ಕಟ್ಟಡ ನಿರ್ಮಾಣ ಗುರುಗಳ ಆಶೀರ್ವಾದದಿಂದ ಕೇವಲ ಮೂರೇ ತಿಂಗಳಲ್ಲಿ ಆಗಿದೆ. ಅದಕ್ಕೂ ಮೊದಲು ಈ ಸಭಾಭವನಕ್ಕೆ ಶ್ರೀಗಳಿಂದಲೇ ಹೆಸರು ನೀಡಿರುವುದು ಸಂತೋಷದ ವಿಚಾರ ಎಂದರು.

ಶ್ರೀಗಳ ಉಪಸ್ಥಿತಿಯಲ್ಲಿ ಗೌರವ:
ಶಾಸಕ ಅಶೋಕ್ ಕುಮಾರ್ ರೈ, ಶೃಂಗೇರಿ ಮಠದ ಧರ್ಮಾಧ್ಯಕ್ಷ ಬೊಳ್ಳಾವ ಸತ್ಯಶಂಕರ್, ಸಭಾಂಗಣ ನಿರ್ಮಾಣ ಕಾರ್ಯದಲ್ಲಿ ಕಾನೂನು ಚೌಕಟ್ಟಿನಲ್ಲಿ ಸಹಕರಿಸಿದ ಆಗಿನ ನಗರಸಭೆ ಪೌರಾಯುಕ್ತ ಮತ್ತು ಪ್ರಸ್ತುತ ಚುನಾವಣಾ ನಿಮಿತ್ತ ಮುಳುಬಾಗಿನಲ್ಲಿ ಅಧಿಕಾರಿಯಾಗಿರುವ ಮಧು ಎಸ್ ಮನೋಹರ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಷೇಕ್, ಕಟ್ಟಡ ನಿರ್ಮಾಣದ ವೇಳೆ ಸಹಕರಿಸಿದ ಸುಧಾ ಎಲೆಕ್ಟಿçಕಲ್ಸ್ನ ಬಾಲಕೃಷ್ಣ ಕೊಳತ್ತಾಯ, ಸೇವಾ ರೂಪದಲ್ಲಿ ಉಚಿತವಾಗಿ ಇಂಜಿನಿಯರಿAಗ್ ಕೆಲಸ ಮಾಡಿಕೊಟ್ಟ ರವಿನಾರಾಯಣ ಸಿ.ಆರ್, ವಿವೇಕಾನಂದ ಇಂಜಿನಿಯರಿAಗ್ ಕಾಲೇಜಿನ ಪ್ರಾಧ್ಯಾಪಕ ಇಂಇನಿಯರ್ ಡಾ.ಸುಬ್ರಹ್ಮಣ್ಯ ರಾವ್ ರಾಮಕುಂಜ, ಸಿವಿಲ್ ಇಂಜಿನಿಯರ್ ದಿಲೀಪ್ ರಾವ್ ಐ.ಜಿ, ವಿವೇಕಾನಂದ ಇಂಜಿನಿಯರಿAಗ್ ಕಾಲೇಜಿನ ಸಿವಿಲ್ ವಿಭಾಗದ ಪಲ್ಲವಿ, ಕಟ್ಟಡ ರಚನೆಯ ಪ್ರಾರಂಭದಿAದ ಕೊನೆಯ ತನಕ ಸಂಘದ ಕಾರ್ಯ ನಿರ್ವಹಿಸಿದ ಸಂಘದ ನಿರ್ದೇಶಕ ಅಶೋಕ್ ಕುಮಾರ್ ಬೆಟ್ಡಂಪಾಡಿ, ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಮಹಿಳಾ ವಿಭಾಗ ಭಜನಾ ಮಂಡಳಿ ಅಧ್ಯಕ್ಷರಿಗೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವೇ ಮೂ ಜಯರಾಮ ಜೋಯಿಷ, ಶಿಷ್ಯ ಅನ್ವೇಶ್ ಅವರನ್ನು ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಉಪಸ್ಥಿತಿಯಲ್ಲಿ ಶಿವಬ್ರಾಹ್ಮಣ ಸಂಘದ ಅಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ಅವರು ಗೌರವಿಸಿದರು.ಆರಂಭದಲ್ಲಿ ಶೃಂಗೇರಿ ಮಠದ ವೈದಿಕರು ಮಂತ್ರ ಪಠಿಸಿದರು. ಶಿವಬ್ರಾಹ್ಮಣ ಸಮಾಜ ಸೇವಾ ಸಂಘ ಮಹಿಳಾ ವಿಭಾಗದ ಮಿತ್ರ ಭಜನಾ ಮಂಡಳಿಯಿAದ ಶೃಂಗೇರಿ ಕೀರ್ತನೆ ಹಾಡಲಾಯಿತು.ಪ್ರೊ|ವರದರಾಜ ಚಂದ್ರಗಿರಿ ಕಾರ್ಯಕ್ರಮ ನಿರೂಪಿಸಿದರು.ಸಂಘದ ಕಾರ್ಯದರ್ಶಿ ಎ.ಬಾಲಕೃಷ್ಣ ರಾವ್, ಕೋಶಾಧಿಕಾರಿ ಎನ್.ಎಸ್ ನಟರಾಜ, ಆಡಳಿತ ಮಂಡಳಿ ಸದಸ್ಯರಾದ ನರೇಂದ್ರ ಎಂ, ಸದಾನಂದ ರಾವ್ ಎನ್, ಬಿ.ಅಶೋಕ್ ಕುಮಾರ್, ರವೀಂದ್ರ ಯಚ್.ವಿ, ಶ್ರೀನಿವಾಸ ರಾವ್ ಕೆ, ಹೆಚ್.ಎಸ್.ಶಿವಪ್ರಸಾದ್, ಕೆ.ಉದಯ ಕುಮಾರ್ ಮತ್ತು ಸಮಾಜ ಬಾಂಧವರು, ರಾಜೇಶ್ ಪವರ್ ಪ್ರೆಸ್‌ನ ಮಾಲಕ ರಘುನಾಥ್ ರಾವ್ ಹಾಗು ಮಹಾಲಿಂಗೇಶ್ವರ ದೇವಳದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಪುಡಾ ಮಾಜಿ ಅಧ್ಯಕ್ಷ ಕೌಶಲ್‌ಪ್ರಸಾದ್ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ಸಮಾರಂಭದ ಆರಂಭದಲ್ಲಿ ಶ್ರೀಗಳಿಗೆ ಧೂಳಿ ಪೂಜೆ ನಡೆಯಿತು.ಶಿವಬ್ರಾಹ್ಮಣ ಸಂಘದ ಅಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ದಂಪತಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಭೆಯ ಕೊನೆಯಲ್ಲಿ ಭಕ್ತರಿಗೆ ಶ್ರೀಗಳ ಮಂತ್ರಾಕ್ಷತೆ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಿತು.

ಇಲ್ಲಿ ಶುಭ ಕಾರ್ಯಕ್ರಮಕ್ಕೆ ಶಿವನ ಕೃಪೆಯಿರಲಿ- ಐಕ್ಯತೆಯಿರಲಿ
ಪುತ್ತೂರು ಮಹಾನಗರದಲ್ಲಿ ನೂತನ ಸಭಾಭವನಕ್ಕೆ ಶಿವಕೃಪಾ ನಾಮಕರಣವಾಗಿದೆ.ಉದ್ಘಾಟನೆ ಮಾಡಿದ್ದೇವೆ.ವಿಶೇಷವಾಗಿ ಇಲ್ಲಿಗೆ ಬಂದು ಯಾರು ತಮ್ಮ ಶುಭ ಕಾರ್ಯಕ್ರಮ ಮಾಡುತ್ತಾರೋ ಅವರೆಲ್ಲರಿಗೂ ಶಿವನ ಕೃಪೆ ಇರಲಿ. ಶಿವನ ಕೃಪೆಯಲ್ಲಿ ಎಲ್ಲಾ ಕಾರ್ಯಕ್ರಮ ನಡೆಯಲಿ.ಏನಾದರೂ ಕಾರ್ಯ ನಡೆಯಲು ಶಿವನ ಕೃಪೆ ಅವಶ್ಯವಾಗಿ ಬೇಕು. ಅದಕ್ಕೆ ಈ ಶಿವಕೃಪಾ ಸಭಾವನ ಪೂರಕವಾಗಿ ನಡೆಯಲಿ.ಶಿವನ ಕುಟುಂಬದಲ್ಲಿರುವ ವಾಹನಗಳು ಹೊರಗಿನ ಪ್ರಪಂಚದಲ್ಲಿ ಬೇರೆ ಬೇರೆ ಇದ್ದರೂ ಈಶ್ವರನ ಸನ್ನಿಧಿಯಲ್ಲಿ ಐಕ್ಯಮತ್ಯದಿಂದ ಇರುತ್ತಾರೆ. ಅದೇ ರೀತಿ ನಮ್ಮಲ್ಲಿ ಪರಸ್ಪರ ವೈರುತ್ವ ಇದ್ದರೂ ಸಹ ಒಳ್ಳೆಯ ಧರ್ಮದ, ದೇವರ ಕೆಲಸ ಮಾಡುವಾಗ ಎಲ್ಲರೂ ಸಹ ಐಕ್ಯಮತ್ಯವನ್ನು ಹೊಂದಬೇಕು-
ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು

LEAVE A REPLY

Please enter your comment!
Please enter your name here