ಪುತ್ತೂರು: ಕಾರಣಿಕ ಕ್ಷೇತ್ರವಾಗಿರುವ ಇಲ್ಲಿನ ರೈಲ್ವೇ ನಿಲ್ದಾಣದ ಬಳಿಯಿರುವ ಶ್ರೀ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವಗಳು ಏ.26ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 7.30ಕ್ಕೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಮಹಾಪೂಜೆಯಾಗಿ ಬಳಿಕ ಪಾಷಾಣಮೂರ್ತಿ, ನಾಗ ಮತ್ತು ಗುಳಿಗನಿಗೆ ತಂಬಿಲ ನಡೆಯಲಿದೆ. ಗಂಟೆ 10ರಿಂದ ಬನ್ನೂರು ಶನೀಶ್ವರ ಭಜನಾ ಮಂಡಳಿಯವರಿಂದ ಭಜನೆ, 12ರಿಂದ ಮೂಡಾಯೂರು ಚಂದ್ರಶೇಖರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಹಾಪೂಜೆ, ಶ್ರೀದೇವಿ ದರ್ಶನ, ಪ್ರಸಾದ ವಿತರಣೆ ನಡೆದು ಪ್ರಸಾದ ಭೋಜನ ನಡೆಯಲಿದೆ. ಸಂಜೆ 4ರಿಂದ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. 6.30ರಿಂದ ಮಸ್ಕಿರಿ ಕುಡ್ಲ ದೀಪಕ್ ರೈ ಪಾಣಾಜೆ ಇವರಿಂದ ತೆಲಿಕೆ ಬಂಜಿ ನಿಲಿಕೆ ನಡೆಯಲಿದೆ. ರಾತ್ರಿ ಶ್ರೀದೇವಿಗೆ ಮಹಾಪೂಜೆ ದೇವಿ ದರ್ಶನ ನಡೆದ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9.30ರಿಂದ ಬಪ್ಪನಾಡು ಮೇಳದವರಿಂದ ‘ನಾಡೂರ ನಾಗಬನ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ಎ.28ಕ್ಕೆ ನೇಮ:
ಶ್ರೀ ಕ್ಷೇತ್ರದಲ್ಲಿ ಏ.28ರಂದು ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ ಹಾಗೂ ಮೇ.5ರಂದು ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಎನ್.ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ.