ಪುತ್ತೂರು: ಉಪ್ಪಿನಂಗಡಿ ಹಳೆ ಬಸ್ಸು ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಸಿಟಿ ಸೆಂಟರ್ ಕಲೆಕ್ಷನ್‌ನಲ್ಲಿ ಒಂದು ಜೊತೆ ಚಪ್ಪಲ್ ಖರೀದಿ ಮೇಲೆ ನಿಮ್ಮ ಹಳೆಯ ಚಪ್ಪಲ್ ಕೊಟ್ಟು ಮತ್ತೊಂದು ಜೊತೆ ಚಪ್ಪಲ್ ಉಚಿತವಾಗಿ ಪಡೆದುಕೊಳ್ಳುವ ‘ತೂಫಾನ್ ಆಫರ್, ಸುನಾಮಿ ಸೇಲ್’ ಗ್ರಾಹಕರಿಗೆ ಕೈಗೆಟುಕಲಿದ್ದು ಇದರ ಉದ್ಘಾಟನೆಯು ಏ.25ರಂದು ಮಳಿಗೆಯಲ್ಲಿ ನೆರವೇರಿತು.
ಮಾತಿನ ಮೂಲಕ ಉದ್ಘಾಟನೆಯನ್ನು ನೆರವೇರಿಸಿದ ಉಪ್ಪಿನಂಗಡಿ ಛೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷ ಶಬ್ಬೀರ್ ಕೆಂಪಿ ಮಾತನಾಡಿ, ವ್ಯವಹಾರದಲ್ಲಿ ಚತುರತೆಯನ್ನು ಹೊಂದಿರುವ ಮಳಿಗೆಯ ಮಾಲಕ ರಫೀಕ್ ಓರ್ವ ಸ್ನೇಹಜೀವಿ ಹಾಗೂ ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಳ್ಳುವ ವ್ಯಕ್ತಿತ್ವವುಳ್ಳವರು. ಉಪ್ಪಿನಂಗಡಿಯಲ್ಲಿ ಮಳಿಗೆಯನ್ನು ಹುಟ್ಟುಹಾಕಿ ಎಲ್ಲರಿಗೂ ಚಿರಪರಿಚಿತರಾಗುವ ಮೂಲಕ ವ್ಯವಹಾರ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಇದೀಗ ನೂತನ ಯೋಚನೆಯೊಂದಿಗೆ ಗ್ರಾಹಕರಿಗೆ ಮಹತ್ತರ ಪ್ರಯೋಜನವನ್ನು ಉಣಬಡಿಸಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯಅತಿಥಿ, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಪ್ರಥ್ವಿ ಶಾಪಿಂಗ್ ಮಾಲ್‌ನಲ್ಲಿನ ಶ್ರೀ ಫ್ಯಾನ್ಸಿ ಸೆಂಟರ್ ಮಾಲಕ ರಮೇಶ್ ಸುಭಾಶ್‌ನಗರ ಮಾತನಾಡಿ, ಸಿಟಿ ಸೆಂಟರ್ ಅಂದರೆ ಉಪ್ಪಿನಂಗಡಿ ಹಾಗೂ ಇನ್ನಿತರ ಭಾಗದಲ್ಲಿ ಬಹಳ ಚಿರಪರಿಚಿತರೆನಿಸಿಕೊಂಡಿದೆ. ಹಳೆಯ ಚಪ್ಪಲ್ ಕೊಟ್ಟು ಹೊಸ ಚಪ್ಪಲ್ ಪಡೆಯುವ ಒಂದು ವಿನೂತನ, ವಿಶಿಷ್ಟ ಪ್ರಯೋಗದೊಂದಿಗೆ ಸಿಟಿ ಸಿಂಟರ್ ಗ್ರಾಹಕರಿಗೆ ಇದೇ ಮೊದಲ ಬಾರಿಗೆ ಪರಿಚಯಿಸುತ್ತಿದೆ. ಈ ಹೊಸತನದ ಪ್ರಯೋಗ ಯಶಸ್ವಿಯಾಗಲಿ ಹಾಗೂ ಈ ಯೋಜನೆಯು ಎಲ್ಲೆಡೆ ಪಸರಿಸಲಿ, ಇದರೊಂದಿಗೆ ಸೌಹಾರ್ದತೆ ಮೇಳೈಸಲಿ ಎಂದು ಹೇಳಿ ಶುಭ ಹಾರೈಸಿದರು.
ಮಳಿಗೆಯಲ್ಲಿನ ಸಿದ್ಧ ಉಡುಪುಗಳ ಮಳಿಗೆಯ ಪಾಲುದಾರರಾದ ನವಾಜ್ ಎಲೈಟ್ ಹಾಗೂ ಮಕ್ಸೂದ್ ಎಲೈಟ್, ಮಾಲಕ ರಫೀಕ್ ಎಂ.ಜಿರವರ ಸಹೋದರ ಎಂ.ಜಿ ಮಜೀದ್, ಸಿಬ್ಬಂದಿಗಳಾದ ಮಕ್ಸೂದ್ ಎಂ.ಕೆ, ಖಲಂದರ್, ರಫೀಕ್, ಶಮೀರ್, ತೌಫೀಕ್, ಬುಶೈರ್, ಸಫ್ವಾನ್, ಫಯಾಜ್, ಹೈದರ್ ಉಪಸ್ಥಿತರಿದ್ದು ಸಹಕರಿಸಿದರು. ಮಳಿಗೆಯ ಮಾಲಕ ರಫೀಕ್ ಎಂ.ಜಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಿಟಿ ಸೆಂಟರ್‌ನಲ್ಲಿ ತೂಫಾನ್ ಸೇಲ್..
*ಒಂದು ಜೊತೆ ಚಪ್ಪಲ್ ಖರೀದಿಯೊಂದಿಗೆ ನಿಮ್ಮ ಹಳೆಯ ಚಪ್ಪಲ್ ಕೊಟ್ಟು ಮತ್ತೊಂದು ಜೊತೆ ಚಪ್ಪಲ್ ಪಡೆಯುವ ಸುವರ್ಣಾವಕಾಶ
*ರೆಡಿಮೇಡ್ ಗಾರ್ಮೆಂಟ್ಸ್, ಸಾರಿ, ಮಕ್ಕಳ ಡ್ರೆಸ್, ಲೇಡೀಸ್/ಜಂಟ್ಸ್ ಡ್ರೆಸ್ ಮುಂತಾದ ಸಿದ್ಧ ಉಡುಪುಗಳ ಮಳಿಗೆಯಲ್ಲಿ ಮೆಗಾ ಡಿಸ್ಕೌಂಟ್
*ಗೃಹೋಪಯೋಗಿ ಉತ್ಪನ್ನಗಳ ಮೆಗಾ ಡಿಸ್ಕೌಂಟ್
*ನಂಬಲು ಅಸಾಧ್ಯವಾದ ಬೆಲೆಯಲ್ಲಿ, ಒಮ್ಮೆ ಭೇಟಿ ನೀಡಿ, ಖಚಿತಪಡಿಸಿಕೊಳ್ಳಿ
ಗ್ರಾಹಕರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ..
ಮಳಿಗೆಯು ಆರಂಭವಾಗಿ ಮೂರು ವರ್ಷಗಳಾಗಿದ್ದು, ಒಂದು ಜೊತೆ ಚಪ್ಪಲ್ ಖರೀದಿಯೊಂದಿಗೆ ನಿಮ್ಮ ಹಳೆಯ ಚಪ್ಪಲ್ ಕೊಟ್ಟು ಮತ್ತೊಂದು ಜೊತೆ ಚಪ್ಪಲ್ ಪಡೆಯುವ ಧ್ಯೇಯ ವಾಕ್ಯದೊಂದಿಗೆ ಈ ಸುನಾಮಿ ಸೇಲ್ ಆರಂಭಿಸಿದ್ದೇವೆ. ಅದರಂತೆ ನಮ್ಮಲ್ಲಿ ಮದುವೆಗೆ ಬೇಕಾದಂತಹ ಐಟಂಗಳು, ಎಲ್ಲಾ ತರಹದ ಲೇಡೀಸ್, ಜಂಟ್ಸ್, ಮಕ್ಕಳ ಡ್ರೆಸ್ ಮೇಲೆ ಶೇ.50 ರತನಕ ಮೆಗಾ ಡಿಸ್ಕೌಂಟ್ ಇದೆ. ಗೃಹೋಪಯೋಗಿ ಉತ್ಪನ್ನಗಳಲ್ಲಿ ಒಂದು ಖರೀದಿಗೆ ಮತ್ತೊಂದು ಉಚಿತವೆಂಬಂತೆ ನೀಡುತ್ತಿದ್ದೇವೆ. ಯಾವುದೇ ಡ್ರೆಸ್ ಆಗಲಿ, ಪಾದರಕ್ಷೆಗಳಾಗಲಿ, ಮೂರು ವರ್ಷಗಳಲ್ಲಿ ಅವು ಹಳೆಯದಾಗಿ ಅದರ ಫ್ಯಾಶನ್ ಚೇಂಜ್ ಆಗಿ ಬಿಡುತ್ತದೆ. ಆದ ಕಾರಣ ವಸ್ತುಗಳು ಹಾಳಾಗಬಾರದು, ಅದರ ಉಪಯೋಗವಾಗಲಿ, ಗ್ರಾಹಕರು ಆ ಮೂಲಕ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂಬುದೇ ನಮ್ಮ ಉದ್ಧೇಶವಾಗಿದೆ.
-ರಫೀಕ್ ಎಂ.ಜಿ, ಮಾಲಕರು, ಸಿಟಿ ಸೆಂಟರ್, ಉಪ್ಪಿನಂಗಡಿ