ಜೆ ಇ ಮೈನ್ಸ್ 2-2024 ಪ್ರವೇಶ ಪರೀಕ್ಷೆ : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

0

ಗಮನ ಗೌರಿ ಎಸ್ ಎಂ ಗೆ 98.23 ಪರ್ಸಂಟೈಲ್, ರಾಷ್ಟ್ರ ಮಟ್ಟದಲ್ಲಿ 4440 ನೇ ರ‍್ಯಾಂಕ್‌
ಚಿನ್ಮಯಕೃಷ್ಣ ವರ್ಮಾನಿಗೆ 96.99 ಪರ್ಸಂಟೈಲ್, ರಾಷ್ಟ್ರ ಮಟ್ಟದಲ್ಲಿ 7555 ನೇ ರ‍್ಯಾಂಕ್‌


ಪುತ್ತೂರು: ಕೇಂದ್ರ ಸರಕಾರದ NTA ಪ್ರಾಧಿಕಾರವು ನಡೆಸುವ ರಾಷ್ಟ್ರಮಟ್ಟದ 2024ನೇ ವರ್ಷದ ಜೆ ಇ ಮೈನ್ಸ್- 2 ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಕಾಲೇಜಿನ ಅನೇಕ ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಳಿಗಿಂತಲೂ ಅಧಿಕ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಗಮನ ಗೌರಿಎಸ್‌ಎಂ 98.23 (ಬೆಳ್ತಂಗಡಿ ತಾಲೂಕಿನ ಮಹೇಶ್ ಎಸ್ ಮತ್ತು ದೀಪ ಮಹೇಶ್ ದಂಪತಿಗಳ ಪುತ್ರಿ), ಚಿನ್ಮಯಕೃಷ್ಣ ವರ್ಮಾ 96.99(ಪುತ್ತೂರಿನ ಗೋಪಿನಾಥ್ ಎ. ಬಿ ಹಾಗೂ ವಂದನಾದೇವಿ ವಿ ದಂಪತಿಗಳ ಪುತ್ರ), ಆದರ್ಶ ಇ 96.56 (ಬಂಟ್ವಾಳದ ಗಿರೀಶ್ ಇ ಮತು ಉಷಾ ಸರಸ್ವತಿ ದಂಪತಿಗಳ ಪುತ್ರ), ವಿಂಧ್ಯಾ ಕಾರಂತ್ 96.45 (ಪುತ್ತೂರಿನ ಪ್ರೊ. ಕೃಷ್ಣ ಕಾರಂತ ಮತ್ತು ಸಂಧ್ಯಾ ಕಾರಂತ್ ದಂಪತಿಗಳ ಪುತ್ರಿ), ಸೌಮ್ಯ ಕೆ 95.12 (ಪುತ್ತೂರಿನ ಸುರೇಶ್ ಕೆ ಮತ್ತು ಗಾಯತ್ರಿ ಸುರೇಶ್ ದಂಪತಿಗಳ ಪುತ್ರಿ), ಭೂಮಿಕಾ ಕೆ ಕೊಟ್ಟಾರಿ 94.51 (ಕಲ್ಲಡ್ಕದ ಕಮಲಾಕ್ಷ ಮತ್ತು ಶ್ವೇತಾ ದಂಪತಿಗಳ ಪುತ್ರಿ), ಶಮಂತ್ ಕುಮಾರ್ ಕೆ. 94.09(ಸುಳ್ಯ ತಾಲೂಕಿನ ಕೆ.ಚಂದ್ರಶೇಖರ ಉಪಾಧ್ಯಾಯ ಹಾಗೂ ವೀಣಾಕೆದಂಪತಿಗಳ ಪುತ್ರ ), ಅಂಕಿತಾ ಡಿ 94.06 (ಬಂಟ್ವಾಳದ ದಾಮೋದರ ಮತ್ತು ಉಷಾ ದಂಪತಿಗಳ ಪುತ್ರಿ), ಅದಿತಿ ಕೆ 92.92 (ಪುತ್ತೂರಿನ ಧರ್ಬೆಯ ಕೆ ಶಂಕರ್ ಮತ್ತು ವಂದನಾ ಶಂಕರ್ ದಂಪತಿಗಳ ಪುತ್ರಿ ), ರಶ್ಮೀ ಆರ್ ನಾಯ್ಕ್ 91.96 (ಪುತ್ತೂರಿನ ರಿತೇಶ್ ನಾಯ್ಕ್ ಮತ್ತು ಲಾವಣ್ಯ ಬಿ ದಂಪತಿಗಳ ಪುತ್ರಿ), ವಿನಾಯಕ ಜೆ 91.15(ಮೈಸೂರಿನ ಜಗದೀಶ್ ಎಚ್ ಪಿ, ಮಹೇಶ್ವರಿ ಎಸ್ ದಂಪತಿಗಳ ಪುತ್ರ),ಅಕ್ಷಯ್ ಪಿ 90.42 (ಸುಳ್ಯ ತಾಲೂಕಿನ ದಯಾನಂದ ಪಿ ಮತ್ತು ಪ್ರತಿಮಾ ಯು ಕೆ ದಂಪತಿಗಳ ಪುತ್ರ). ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here