ಪುತ್ತೂರು: ಕರಾವಳಿಯ ಹೆಸರಾಂತ ಸೇವಾ ಸಂಸ್ಥೆ ಎಂ(ಮರ್ಸಿ).ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ 2024-26ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಅನಿವಾಸಿ ಉದ್ಯಮಿ, ಕೊಡುಗೈ ದಾನಿ, ಸೌದಿ ಅರೇಬಿಯಾದ ಜುಬೈಲ್ ಅಲ್ ಮುಝೈನ್ ಕಂಪೆನಿಯ ಸಿಇಒ ಝಕರಿಯಾ ಜೋಕಟ್ಟೆ ಅವರು ಆಯ್ಕೆಯಾಗಿದ್ದಾರೆ. 11 ವರ್ಷ ತುಂಬಿರುವ ಸಂಸ್ಥೆಯು ವಿವಿಧ ಸ್ತರಗಳಲ್ಲಿ ಸುಮಾರು ರೂ. 5 ಕೋಟಿಯ ಸೇವಾ ಕಾರ್ಯವನ್ನು ಸಮಾಜಕ್ಕೆ ಅರ್ಪಿಸಿದೆ. ಆರೋಗ್ಯ, ಶಿಕ್ಷಣ, ಅನ್ನದಾನ, ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಿದೆ.
ಮಂಗಳೂರಿನ ಓಶಿಯನ್ ಪರ್ಲ್ ಜೇಡ್ ಬ್ಯಾಂಕ್ವೆಟ್ ಹಾಲ್ ನಲ್ಲಿ ಏ.25ರಂದು ನಡೆದ ಎಂ.ಫ್ರೆಂಡ್ಸ್ ಕಾರ್ಯಕಾರಿಣಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆರಿಸಲಾಯಿತು. ಕಾರ್ಯಾಧ್ಯಕ್ಷರಾಗಿ ಸುಜಾಹ್ ಮಹಮ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಆರಿಫ್ ಪಡುಬಿದ್ರಿ, ಕೋಶಾಧಿಕಾರಿಯಾಗಿ ಝುಬೈರ್ ಬುಳೇರಿಕಟ್ಟೆ, ಉಪಾಧ್ಯಕ್ಷರಾಗಿ ಡಾ. ಮುಬಶ್ಶಿರ್, ವಿ.ಎಚ್. ಅಶ್ರಫ್ ವಿಟ್ಲ, ಅಬೂಬಕರ್ ಪುತ್ತು ಉಪ್ಪಿನಂಗಡಿ, ಕಾರ್ಯದರ್ಶಿಗಳಾಗಿ ಅನ್ವರ್ ಹುಸೈನ್ ಗೂಡಿನಬಳಿ ಹಾಗೂ ಶೇಖ್ ಇಸಾಕ್ ಕೋಡಿಂಬಾಳ, ಕಾರ್ಯಕಾರೀ ಸಮಿತಿ ಸದಸ್ಯರಾಗಿ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ರಶೀದ್ ವಿಟ್ಲ, ಮಹಮ್ಮದ್ ಶರೀಫ್ ಮೂಡಬಿದ್ರಿ, ಕಲಂದರ್ ಪರ್ತಿಪಾಡಿ, ಅಬೂಬಕರ್ ನೋಟರಿ, ಎನ್ನಾರೈ ಟ್ರಸ್ಟಿ ಹನೀಫ್ ಪುತ್ತೂರು (ದುಬೈ) ಆಯ್ಕೆಯಾದರು. ಸಂಸ್ಥೆಯಲ್ಲಿ ಒಟ್ಟು 64 ಸದಸ್ಯರಿದ್ದು, 15 ಮಂದಿಯ ಕಾರ್ಯಕಾರೀ ಸಮಿತಿಯನ್ನು ಇತ್ತೀಚೆಗೆ ಮಂಗಳೂರು ಎಚ್.ಐ.ಎಫ್. ಹಾಲ್ ನಲ್ಲಿ ನಡೆದ ತ್ರೈವಾರ್ಷಿಕ ಮಹಾಸಭೆಯಲ್ಲಿ ಆರಿಸಲಾಗಿತ್ತು.