ಚುನಾವಣಾ ಬೂತಿನಲ್ಲಿ ಪಕ್ಷದ ಶಾಲು ಹಾಕಿದ ಮಕ್ಕಳು ಠಿಕಾಣಿ- ಆಕ್ಷೇಪ

0

ಕಡಬ: ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಮನೆ ಮನೆ ಪ್ರಚಾರದ ವೇಳೆ ಶಾಲಾ ಮಕ್ಕಳನ್ನು ಬಳಸಿಕೊಂಡಿದ್ದರು. ಇದೀಗ ಕಾಂಗ್ರೆಸ್ ಪಕ್ಷದ ಬೂತ್ ನಲ್ಲಿ ಶಾಲಾ ಮಕ್ಕಳು ಠಿಕಾಣಿ ಹೂಡಿರುವುದು ಕಂಡು ಬಂದಿದೆ.
ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಮಡ್ಯಡ್ಕ ಬೂತ್ ಸಂಖ್ಯೆ 95ರಲ್ಲಿ ಈ ಚಿತ್ರಣ ಕಂಡು ಬಂದಿದೆ.

ಬಿಜೆಪಿ ಕಾರ್ಯಕರ್ತರು ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಳ್ಳದಂತೆ ಚುನಾವಣಾ ಆಯೋಗದ ಸ್ಪಷ್ಟ ಸೂಚನೆ ಇದ್ದರೂ ನಿಯಮ ಪಾಲನೆಯಾಗಿಲ್ಲ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here