ನಿಡ್ಪಳ್ಳಿ; ತನ್ನ ಪ್ರಥಮ ಮತ ಚಲಾಯಿಸಿದ ಪುತ್ತೂರು ವಿವೇಕಾನಂದ ಕಾಲೇಜಿನ ಅಂತಿಮ ಡಿಪ್ಲೊಮಾ ವಿದ್ಯಾರ್ಥಿ ಪ್ರಣವ್ ಹೆಬ್ಬಾರ್ ಸಂತಸ ವ್ಯಕ್ತ ಪಡಿಸಿದ್ದು. ನನ್ನ ಮೊದಲ ಮತದಾನ ಸುಗಮವಾಗಿ ನಡೆಯಿತು. 76ರ ಹರೆಯದ ನನ್ನ ಅಜ್ಜಿ ಮತಗಟ್ಟೆಗೆ ತೆರಳಲು ನಮ್ಮೆಲ್ಲರಿಗಿಂತಲೂ ಮೊದಲು ಸಿದ್ಧರಾಗಿದ್ದರು. ಬೆರಳಿಗೆ ಮೊದಲ ಬಾರಿ ಶಾಯಿ ಬಳಿದದ್ದು ನೋಡುವಾಗ ಖುಷಿಯಾಗುತ್ತದೆ. ನಮ್ಮ ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ, ಬದಲಾವಣೆಯ ಬಗ್ಗೆ ಮಾತನಾಡಬೇಕಾದರೆ ಮತದಾನ ಕಡ್ಡಾಯವಾಗಿ ಮಾಡುವುದು ನಮ್ಮ ನೈತಿಕ ಕರ್ತವ್ಯವಾಗಿದೆ ಎಂದು ತನ್ನ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.