ವರುಣನ ಕೃಪೆಗಾಗಿ ಶಾಸಕರ ಸಲಹೆಯಂತೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪರ್ಜನ್ಯ ಜಪ

0

ಪುತ್ತೂರು: ವರುಣನ ಕೃಪೆಗಾಗಿ ಶಾಸಕ ಅಶೋಕ್ ರೈ ಅವರ ಸಲಹೆಯಂತೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.28ರಂದು ಪರ್ಜನ್ಯ ಜಪ ಆರಂಭಗೊಂಡಿತು.


ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಮತ್ತು ವೇ ಮೂ ಜಯರಾಮ ಜೋಯಿಷ ಅವರ ನೇತೃತ್ವದಲ್ಲಿ ಬೆಳಿಗ್ಗೆ ಗಂಟೆ 8.30ಕ್ಕೆ ಸಂಕಲ್ಪ ನೆರವೇರಿತು. ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತು ಬನ್ನೂರು ರೈತರ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸಂಕಲ್ಪ ಕಾರ್ಯಕ್ರಮದಲ್ಲಿ ಶ್ರೀ ದೇವರಿಗೆ ಸೀಯಾಳ ಸಮರ್ಪಣೆ ಮಾಡಿದರು. ದೇವಳದ ಗೋಪುರದಲ್ಲಿ ವೇದ ಸಂವರ್ಧನ ಪ್ರತಿಷ್ಠಾನದ ವತಿಯಿಂದ ಏಕಾದಶ ರುದ್ರ ಪಾರಾಯಣ, ಪರ್ಜನ್ಯ ಸೂಕ್ತ ಜಪಕ್ಕೆ ಚಾಲನೆ ನೀಡಲಾಯಿತು. ಇದೆ ಸಂದರ್ಭ ಶ್ರೀ ದೇವರಿಗೆ ಎಳನೀರು ಅಭಿಷೇಕ, 108 ತಂಬಿಕೆಯ ನೀರಿನ ಅಭಿಷೇಕ ಆರಂಭಗೊಂಡಿತು. ಈ ಸಂದರ್ಭ ದೇವಳದ ಉತ್ಸವ ಸಮಿತಿ ಸದಸ್ಯರಾದ ದಿನೇಶ್ ಪಿ.ವಿ, ರವಿಪ್ರಸಾದ್ ಶೆಟ್ಟಿ, ನಯನಾ ರೈ, ಸುಭಾಷ್ ರೈ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ವೇದ ಸಂವರ್ಧನ ಪ್ರತಿಷ್ಠಾನದ ಜಯರಾಮ ಭಟ್, ಮಣಿಲ ಮಹಾದೇವ ಶಾಸ್ತ್ರೀ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here