ಪುತ್ತೂರು: ಝೀ ಕನ್ನಡ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮೆಘಾ ಆಕ್ಷನ್ಗೆ ಪುತ್ತೂರಿನ ಪುನೀತ್ ಆರ್ಕೆಸ್ಟ್ರಾದ ನಿರ್ದೇಶಕ ಚಂದ್ರಶೇಖರ್ ಹೆಗ್ಡೆ ಅವರ ಪುತ್ರಿ ಪವಿತ್ರ ಹೆಗ್ಡೆ ಆಯ್ಕೆಯಾಗಿದ್ದಾರೆ.
ಪವಿತ್ರ ಹೆಗ್ಡೆ ಅವರು ಕಳೆದ 10 ವರ್ಷಗಳಿಂದ ಮಂಗಳೂರಿನಲ್ಲಿ ಕಿಶೋರ್ ಡಿ ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ತಂಡದಲ್ಲಿ ಹಾಸ್ಯ ಕಲಾವಿದೆಯಾಗಿ ಅಭಿನಯಿಸುತ್ತಿದ್ದು, ಹಲವಾರು ನಾಟಕ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ.ಬಾಲ್ಯದಲ್ಲೇ ಕಲಾ ಕ್ಷೇತ್ರಕ್ಕೆ ಧುಮುಕಿದ ಇವರು 6ನೇ ತರಗತಿಯಿಂದ ನಾಟಕ ಅಭಿನಯ, 2012ರಿಂದ ಮಂಗಳೂರಿನ ತಂಡವಾದ ಮಾನಸ ಕಲಾವಿದರು ತಂಡದಲ್ಲಿ 3 ವರ್ಷ ಅಭಿನಯ, ಹೀಗೆ ಹಲವಾರು ತಂಡಳದಲ್ಲಿ ತಮ್ಮ ಅಭಿನಯ ಪಾತ್ರ ಮಾಡಿದ್ದಾರೆ.ತುಳು ಸಿನೆಮಾ ಮತ್ತು ತುಳು ಮತ್ತು ಕನ್ನಡ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ. ನಮ್ಮ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಬಲೆತಲಿಪಾಲೆ’ ಸೀಸನ್ 7ರಲ್ಲಿ ರನ್ನರ್ ಅಪ್ ಆಗಿದ್ದಾರೆ. ವಿ4 ನ್ಯೂಸ್ನಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 2ನಲ್ಲಿ ಮತ್ತು ಸೀಸನ್ 3ಯಲ್ಲಿ ಅಭಿನಯಿಸಿ ಬೆಸ್ಟ್ ಫರ್ಫಾಮೆನ್ಸ್ ಅವಾರ್ಡ್ ಪಡೆದಿದ್ದಾರೆ. ವಿದೇಶದಲ್ಲೂ ನಾಟಕ ಪ್ರದರ್ಶನ ನೀಡಿದ್ದಾರೆ. ಕನ್ನಡ ಕಸ್ತೂರಿ ಚಾನಲ್ನಲ್ಲಿ ಪ್ರಸಾರವಾಗುತ್ತಿದ್ದ ಕಂಜೂಸ್ ಕಮಂಗಿರಾಯ, ಪುತ್ತೂರು ಚಾನೆಲ್ ಆದ ಚಾನಲ್ 9ನಲ್ಲಿ ಪ್ರಸಾರವಾಗುತ್ತಿದ್ದ ಕುಡ ತೆಲಿಪುಗ, ಡಾಯಿಜಿ ವರ್ಲ್ಡ್ನಲ್ಲಿ ಪ್ರಸಾರವಾಗುತ್ತಿದ್ದ ಬಾಬಣ್ಣ ಬೂಬಣ್ಣ, ಕಿರುಚಿತ್ರವಾದ ಕಲ್ಕುಡ ಕಲ್ಲುರ್ಟಿ, ವಾತ್ಸಲ್ಯ, ನೋ ಬಾಲ್, ಕೊಕೊನಾಟ್ ಸಹಿತ ಹಲವು ಚಲನಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದರು.ಇವರಿಗೆ ಹಲವಾರು ಸನ್ಮಾನ ಪತ್ರಗಳು ಲಭಿಸಿದೆ. ಇವರು ಪುತ್ತೂರು ಚಂದ್ರಶೇಖರ್ ಹೆಗ್ಡೆ ಮತ್ತು ಮಯಾದೇವಿ ಅವರ ಪುತ್ರಿಯಾಗಿದ್ದು ಪ್ರಜ್ವಲ್ ಹೆಗ್ಡೆಯವರ ಪತ್ನಿಯಾಗಿದ್ದಾರೆ.