ಪುತ್ತೂರು:ನಗರದ ಮನೆಯೊಂದಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ವರದಿಯಾಗಿದೆ.ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಬಕ ಗ್ರಾಮದ ಮುರ ಭಾರತ್ ಲೈಮ್ ಫ್ಯಾಕ್ಟರಿ ಹತ್ತಿರದ ನಿವಾಸಿ ಎನ್. ಚೆನ್ನಪ್ಪ ಎಂಬವರ ಮಗ ರವಿ ಎನ್ ಎಂಬವರು ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.’ಏ.26ರಂದು ಮತದಾನ ಮಾಡಲು ತಾನು ಬೊಳ್ಳಾರ್ ಶಾಲೆಗೆ ಹೋಗಿ ನಂತರ ಮನೆಗೆ ಬಂದು ಸುಮಾರು 8:30 ಗಂಟೆಗೆ ಮನೆಗೆ ಬೀಗ ಹಾಕಿ ಅತ್ತೆ ಮನೆಯಾದ ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ದೈಗೋಳಿ ಎಂಬಲ್ಲಿಗೆ ಒಮ್ನಿ ಕಾರಲ್ಲಿ ಹೋಗಿದ್ದೆ.ಏ.28ರಂದು ಬೆಳಿಗ್ಗೆ 5:30 ಗಂಟೆಗೆ ಮುರಕ್ಕೆ ಬಂದಾಗ ಮನೆಯ ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು ಸೆಂಟರ್ ಲಾಕ್ನ್ನು ಮೀಟಿ ತೆರೆದು ಮನೆಯ ಬೆಡ್ ರೂಮ್ ಒಳಗೆ ಹೋಗಿ ಅಲ್ಲಿದ್ದ ಕಬ್ಬಿಣದ ಕಪಾಟಿನ ಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ತೆರೆದು ಕಪಾಟಿನ ಸೇಫ್ ಲಾಕರನ್ನು ಮೀಟಿ ತೆರೆದು ಅದರಲ್ಲಿದ್ದ ಸುಮಾರು 11 ಗ್ರಾಂ ತೂಕದ ತನ್ನ ಹಳೆಯ ಚಿನ್ನದ -ಸರ-1.(ಅಂದಾಜು ಮೌಲ್ಯ ಸುಮಾರು 49,500). ಸುಮಾರು 9 ಗ್ರಾಂ ತೂಕದ ಬ್ರಾಸ್ ಲೈಟ್ ಅಂದಾಜು ಮೌಲ್ಯ ಸುಮಾರು 40,500) ಅಲ್ಲೇ ಪಕ್ಕದಲ್ಲಿದ್ದ ಕಬ್ಬಿಣದ ಕಪಾಟಿನ ಬಾಗಿಲನ್ನು ಅಲ್ಲೇ ಇದ್ದ ಕೀಯಿಂದ ತೆರೆದು ಸೇಫ್ ಲಾಕರ್ನಲ್ಲಿಟ್ಟಿದ್ದ ಹೆಂಡತಿಯ ಸುಮಾರು 216 ಗ್ರಾಂ ತೂಕದ ಹಳೆಯ ಜೋಮಾಲೆ ಅಂದಾಜು ಮೌಲ್ಯ ರೂ. 12.0001.ಸುಮಾರು 3 ಗ್ರಾಂ ತೂಕದ ಬೆಂಡೋಲೇ ಅಂದಾಜು ಮೌಲ್ಯ 13500 ರೂ.1. ಇನ್ನೊಂದು ಬೆಡ್ ರೂಮ್ ನಲ್ಲಿದ ಕಬ್ಬಿಣದ ಕವಾಟಿನ ಬಾಗಿಲನ್ನು ಅಲ್ಲೇ ಇದ್ದ ಕೀಯಿಂದ ತೆರೆದು ಸೇಫ್ ಲಾಕರ್ ತೆರೆದು ಅತ್ತೆಯ ಸುಮಾರು 3 ಗ್ರಾಂ ತೂಕದ ಬೆಂಡೋಲೆ (ಅಂದಾಜು ಮೌಲ್ಯ 13,500) ” ಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.ಕಳವು ಮಾಡಿದ ಚಿನ್ನಾಭರಣಗಳು ಸುಮಾರು 42ಗ್ರಾಂ ತೂಕ ಇದ್ದು ಇದರ ಅಂದಾಜು ಮೌಲ್ಯ ಸುಮಾರು 1,89,000 ರೂ. ಆಗಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.