ಪುತ್ತೂರು ಜೆಸಿಐ ಘಟಕದಿಂದ ಇಲಾಖಾ ಪರೀಕ್ಷಾ ಪೂರ್ವ ಸಿದ್ಧತೆಗೆ ಉಚಿತ ತರಬೇತಿ

0

ಪುತ್ತೂರು: ರಾಜ್ಯ ಸರಕಾರದ ವಿವಿಧ ವೃಂದದ ಅಧಿಕಾರಿಗಳಿಗೆ 2024ನೇ ಸಾಲಿನ ಒಂದನೇ ಅಧಿವೇಶನದ ಇಲಾಖಾ ಪರಿಕ್ಷೆಗಳನ್ನು ಕರ್ನಾಟಕ ಲೋಕಸೇವಾ ಆಯೋಗವು ಜೂ.7ರಿಂದ ನಡೆಸಲಿರುವ ಹಿನ್ನೆಲೆಯಲ್ಲಿ ಅಕೌಂಟ್ಸ್ ಹಯರ್ ಇಲಾಖಾ ಪರೀಕ್ಷೆಗೆ ಹಾಜರಾಗುವ ವಿವಿಧ ವೃಂಧದ ಸರಕಾರಿ ಅಧಿಕಾರಿಗಳಿಗೆ ಪರೀಕ್ಷಾ ಪೂರ್ವ ಸಿದ್ದತೆಗೆ ಪುತ್ತೂರು ಜೆಸಿಐ ಘಟಕದಿಂದ ಉಚಿತರ ತರಬೇತಿ ನೀಡಲಾಗುವುದು.
ತರಬೆತಿಯು ಮೇ.5ರಿಂದ ಬೆಳಿಗ್ಗೆ ಪುತ್ತೂರು ಕೋರ್ಟ್ ರಸ್ತೆ ಬಳಿಯ ಇಂಡಿಯನ್ ಆರ್ಕೇಟ್ ಕಟ್ಟಡದಲ್ಲಿರುವ ಜೆಸಿ ಸಭಾಂಗಣದಲ್ಲಿ ನಡೆಯಲಿದೆ. ಸರಕಾರಿ ಅಧಿಕಾರಿ/ನೌಕರರು ಉಚಿತವಾಗಿ ನಡೆಯುವ ತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದೆಂದು ಜೆಸಿ ಅಧ್ಯಕ್ಷ ಮೋಹನ್ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here