ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ-ಉಪ್ಪಿನಂಗಡಿಯಲ್ಲಿ ಟ್ರಾಫಿಕ್ ಜಾಮ್ ನಿತ್ಯ ನಿರಂತರ-ತಾಸುಗಟ್ಟಲೇ ಬಿಸಿಲಲ್ಲಿ ನಿಂತು ಹೈರಾಣಾಗಿರುವ ವಾಹನ ಸವಾರರು

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಉಪ್ಪಿನಂಗಡಿಯ ಭಾಗದಲ್ಲಿ ನಡೆಯುತ್ತಿದ್ದು, ಎತ್ತರಿಸಿದ ರಸ್ತೆಯ ನಿರ್ಮಾಣಕ್ಕಾಗಿ ನಿರ್ಮಿಸಲಾದ ಅಂಡರ್ ಪಾಸ್ ನಲ್ಲಿ ಏಕಕಾಲಕ್ಕೆ ವಾಹನಗಳ ಆಗಮನ ಮತ್ತು ನಿರ್ಗಮನ ಅಸಾಧ್ಯವಾಗಿ ವಾಹನ ದಟ್ಟನೆಯುಂಟಾಗಿ ಗಂಟೆಗಟ್ಟಲೆ ಜನ ಬಿಸಿಲಿನ ಬವಣೆಯ ನಡುವೆ ಸಿಲುಕಿ ಸಂಕಷ್ಠಕ್ಕೀಡಾಗುವ ಘಟನೆ ನಿರಂತರ ನಡೆಯುತ್ತಿದೆ.


ಹೆದ್ದಾರಿ ಅಗಲೀಕರಣದ ಕಾಮಗಾರಿಗೆ ಸಂಬಂಧಿತ ತಡೆಗೋಡೆಗಳ ನಿರ್ಮಾಣ, ಸಮರ್ಪಕ ಚರಂಡಿ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಹೆದ್ದಾರಿಯಲ್ಲಿ ಎತ್ತರಿಸಿದ ರಸ್ತೆಯ ನಿರ್ಮಾಣ ಕಾರ್ಯವೂ ಭರದಿಂದ ನಡೆಯುತ್ತಿದೆ. ಆದರೆ ಈ ಮಧ್ಯೆ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಸಂಪರ್ಕ ಸಾಧಿಸುವ ರಸ್ತೆಯಲ್ಲಿ ಅಂಡರ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇಲ್ಲಿ ಏಕ ಕಾಲಕ್ಕೆ ಘನವಾಹನಗಳು ಆಗಮನ ಮತ್ತು ನಿರ್ಗಮನ ಸಮಸ್ಯಾತ್ಮಕವಾಗಿದೆ. ಇದರಿಂದಾಗಿ ವಾಹನಗಳ ಸಂಚಾರ ಹೆಚ್ಚಾಗಿರುವ ವೇಳೆ ವಾಹನಗಳ ಸಂಚಾರಕ್ಕೆ ತಡೆಯುಂಟಾಗಿ ಅಷ್ಠ ದಿಕ್ಕುಗಳಲ್ಲಿಯೂ ವಾಹನಗಳು ಸಂಚರಿಸಲಾಗದೆ ಸಂಕಷ್ಠಗಳು ಎದುರಾಗುತ್ತಿದೆ.


ಇದರಿಂದಾಗಿ ಪೇಟೆಯ ಒಳರಸ್ತೆಗಳಲ್ಲಿಯೂ ವಾಹನಗಳು ಸಂಚರಿಸಲಾಗದೆ ತಡೆಹಿಡಿಯಲ್ಪಟ್ಟು ಜನ ಸಾಮಾನ್ಯರು ತೊಂಡರೆಗೀಡಾಗುತ್ತಾರೆ. ಬುಧವಾರದಂದು ಗೃಹ ಪ್ರವೇಶ , ಮದುವೆಯಂತಹ ಕಾರ್ಯಗಳು ಹೆಚ್ಚಾಗಿದ್ದು, ಪೇಟೆಯಲ್ಲಿ ವಾಹನಗಳ ಸಂಚಾರವೂ ಏರಿಕೆಯಾಗಿತ್ತು. ಇದೇ ವೇಳೆ ವಾಹನಗಳ ಸಂಚಾರಕ್ಕೆ ದೀರ್ಘ ಕಾಲ ತಡೆಯುಂಟಾಗಿ ಕಾರ್ಯಕ್ರಮಗಳಿಗೆ ಹೊರಟವರು ಸಮಯಕ್ಕೆ ಸರಿಯಾಗಿ ತಲುಪಲಾಗದೆ ಒದ್ದಾಡಿದರು. ಹೆದ್ದಾರಿಯ ಎರಡೂ ಪಾರ್ಶ್ವದಲ್ಲೂ ಕಿ.ಮೀ. ಗಟ್ಟಲೆ ವಾಹನಗಳು ಸಂಚರಿಸಲಾಗದೆ ತಡೆಹಿಡಿಯಲ್ಪಟ್ಟರೆ, ಇನ್ನು ಹೆದ್ದಾರಿಗೆ ಸಂಪರ್ಕ ಸಾಧಿಸುವ ಬಹುತೇಕ ಎಲ್ಲಾ ರಸ್ತೆಗಳಲ್ಲಿಯೂ ವಾಹನಗಳ ಸಂಚಾರಕ್ಕೆ ತಡೆಯುಂಟಾಗಿ ಸಮಸ್ಯೆಗೆ ತುತ್ತಾದರು.
ಹೆದ್ದಾರಿಯಲ್ಲಿನ ಎತ್ತರಿಸಿದ ರಸ್ತೆಯ ನಿರ್ಮಾಣದ ನಿಮಿತ್ತ ಹೆದ್ದಾರಿಯ ಇಕ್ಕೆಲಗಳಲ್ಲಿಯೂ ತ್ವರಿತವಾಗಿ ಸರ್ವೀಸ್ ರಸ್ತೆಯನ್ನು ನಿರ್ಮಿಸಿ ಬಳಕೆಗೆ ಬಿಟ್ಟು ಕೊಟ್ಟಲ್ಲಿ ಈ ಸಮಸ್ಯೆ ನಿವಾರಣೆಯಾಗಲಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದರ ಬಗ್ಗೆ ಕಾಳಜಿಯುತವಾಗಿ ಗಮನ ಹರಿಸಬೇಕಾಗಿದೆ.

LEAVE A REPLY

Please enter your comment!
Please enter your name here