ಮರೆಯಲ್ಲಿದ್ದು ಸಮಾಜಕ್ಕೆ ಕೊಡುಗೆ ನೀಡುವುದೇ ಶ್ರಮಿಕ ವರ್ಗ-ಡಿಟಿ ಗೋಪಾಲ್
ರಜತ ಸಂಭ್ರಮಕ್ಕೆ 5 ಸಾವಿರಕ್ಕಿಂತ ಹೆಚ್ಚಿನ ಜನರ ನಿರೀಕ್ಷೆ-ಕೇಶವ ಅಮೈ
ಪುತ್ತೂರು:ಎಸ್‌ಆರ್‌ಕೆ ಲ್ಯಾಡರ‍್ಸ್ ಸಂಸ್ಥೆಯ ರಜತ ಸಂಭ್ರಮದ ಅಂಗವಾಗಿ ಮೇ 1ರಂದು ಸಂಸ್ಥೆಯ ಸಿಬ್ಬಂದಿಗಳಿಗೆ ಕ್ರೀಡಾ ಸಂಭ್ರಮ ಮತ್ತು ಕಾರ್ಮಿಕ ದಿನಾಚರಣೆಯು ಕಡಬ ತಾಲೂಕಿನ ಕೊಯಿಲ ಕಲಾಯಿಗುತ್ತುವಿನಲ್ಲಿ ನಡೆಯಿತು.
ಮರೆಯಲ್ಲಿದ್ದು ಸಮಾಜಕ್ಕೆ ಕೊಡುಗೆ ನೀಡುವುದೇ ಶ್ರಮಿಕ ವರ್ಗ:
ಕಡಬ ಉಪತಹಸೀಲ್ದಾರ್ ಗೋಪಾಲ್ ಅವರು ಮಾತನಾಡಿ ಕಾಯಕದಿಂದಲೇ ಯಾರನ್ನೂ ಗುರುತಿಸಲು ಸಾಧ್ಯವಿಲ್ಲ.ಕಾಯಕದ ಮೇಲೆ ಪ್ರೀತಿಯಿದ್ದಾಗ ಉತ್ತಮ ಬಾಂಧವ್ಯ ಬೆಳೆಯುತ್ತದೆ.ಸಜ್ಜನಿಕೆ, ಸರಳತೆಗೆ ಜೀವನದಲ್ಲಿ ಸ್ಥಾನಮಾನ ಸಿಗುತ್ತದೆ.ಇಂತಹ ಸ್ಥಾನಮಾನ ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರಿಗೆ ಸಿಗಬೇಕು.ಅವರು ಶ್ರಮಿಕ ವರ್ಗಕ್ಕೆ ಜೀವನ ನೀಡಿದವರಾಗಿದ್ದಾರೆ.ಮರೆಯಲ್ಲಿದ್ದು ಸಮಾಜಕ್ಕೆ ಕೊಡುಗೆ ನೀಡುವುದೇ ಶ್ರಮಿಕ ವರ್ಗ.ಅವರನ್ನು ಗುರುತಿಸುವ ಕೆಲಸ ಕೇಶವ ಅಮೈ ಅವರು ಮಾಡಿದ್ದಾರೆ ಎಂದರು.ಶ್ರಮಿಕ ವರ್ಗ ಸರಕಾರದ ಸೌಲಭ್ಯ ಪಡೆಯುವಲ್ಲಿ ಕಂದಾಯ ಇಲಾಖೆ ಸಹಕಾರ ನೀಡುವಲ್ಲಿ ನಾವು ಭಾಗಿಯಾಗುತ್ತೇವೆ ಎಂದವರು ಹೇಳಿದರು.
ರಜತ ಸಂಭ್ರಮಕ್ಕೆ 5 ಸಾವಿರಕ್ಕಿಂತ ಹೆಚ್ಚಿನ ಜನರ ನಿರೀಕ್ಷೆಯಿದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರು ಮಾತನಾಡಿ ಎಸ್.ಆರ್.ಕೆ.ಲ್ಯಾಡರ‍್ಸ್ ಸಂಸ್ಥೆ ಹುಟ್ಟಿನಿಂದ ಇವತ್ತಿನ ತನಕ ಹಲವು ಸಮಾಜಮುಖಿ ಕಾರ್ಯ ಮಾಡುತ್ತಾ ಬಂದಿದೆ.ಕೃಷಿಕರಿಗಾಗಿ ಹುಟ್ಟಿಕೊಂಡ ಸಂಸ್ಥೆಗೆ ಇವತ್ತು 25 ವರ್ಷ ತುಂಬಿದೆ.ಅದರ ರಜತ ಸಂಭ್ರಮದ ಸಮಾರೋಪ ಮೇ 25ಕ್ಕೆ ಇದೇ ಕಲಾಯಿಗುತ್ತು ಸ್ಥಳದಲ್ಲಿ ನಡೆಯಲಿದೆ.ಸುಮಾರು 5 ಸಾವಿರಕ್ಕೂ ಮಿಕ್ಕಿ ಜನರ ನಿರೀಕ್ಷೆಯಿದೆ ಎಂದು ಹೇಳಿ,ಎಲ್ಲರೂ ಪ್ರೀತಿಯಿಟ್ಟು ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿನಂತಿಸಿದರು.
ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ಸತೀಶ್ ಭಟ್ ಅವರು ಮಾತನಾಡಿ ಕಾರ್ಮಿಕರ ಸೌಲಭ್ಯ ಮತ್ತು ಕಾನೂನಿನ ಅರಿವಿನ ಕುರಿತು ಮಾಹಿತಿ ನೀಡಿದರು.ತೆರೆ ಮರೆಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಶ್ರಮವನ್ನರಿತು ಅವರನ್ನು ಕೇಶವ ಅಮೈ ಅವರು ಗೌರವಿಸಿರುವುದು ಶ್ಲಾಘನೀಯ ವಿಚಾರ ಎಂದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐ ನಿವೃತ್ತ ಪ್ರಾಂಶುಪಾಲ ಭವಾನಿ ಗೌಡ ಪರಂಗಾಜೆ ಅವರು ಮಾತನಾಡಿ ದೇಶದ ಯಂತ್ರ ನಡೆಯಲು ಕಾರ್ಮಿಕರು ಅಗತ್ಯ.ಆದರೆ ನಮಗೆ ಕೇಶವಣ್ಣನೇ ಸ್ಪೂರ್ತಿಯ ಚಿಲುಮೆ ಎಂದರು.ತಾನು ಅಪಘಾತಕ್ಕೊಳಗಾಗಿ ನಿಶಕ್ತಿಹೊಂದಿದ್ದ ವೇಳೆ ನನಗೆ ಸ್ಪೂರ್ತಿಯಾದ ಕೇಶವ ಅಮೈ ಅವರ ಸಲಹೆಯನ್ನು ಈ ಸಂದರ್ಭ ಮೆಲುಕು ಹಾಕಿದರು.
ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಸುನೀತ್‌ರಾಜ್ ಶೆಟ್ಟಿ ಅವರು ಮಾತನಾಡಿ ದೂರದ ಬಿಳಿನೆಲೆಯಲ್ಲಿ ಹುಟ್ಟಿ, ಪುತ್ತೂರಿನಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿ, ನಮ್ಮ ಗ್ರಾಮದಲ್ಲಿ ಕೇಶವ ಅಮೈ ಅವರು ವಾಸ್ತವ್ಯ ಹೊಂದಿರುವುದು ಸದಾಶಿವ ದೇವರು ಕೊಟ್ಟ ವರವಾಗಿದೆ.ಅವರು ದೇವಸ್ಥಾನಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಕಡಬ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ ಅವರು ಮಾತನಾಡಿ ದೇಶದ ಶಕ್ತಿ ಇನ್ನಷ್ಟು ವೃದ್ದಿಸಬೇಕಾದರೆ ಇಂತಹ ಕಾರ್ಯಕ್ರಮ ಅಗತ್ಯ.ಶ್ರಮಿಕರನ್ನು ಗುರುತಿಸುವ ದೊಡ್ಡ ಕೆಲಸವನ್ನು ಕೇಶವಣ್ಣ ಮಾಡಿರುವುದು ಸಮಾಜಕ್ಕೆ ಮಾದರಿ ಎಂದರು.ಆಲಂಕಾರು ಸಿ.ಎ.ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಲೋಕನಾಥ್ ರೈ ರಾಮಕುಂಜ ಅವರು ಸಂದರ್ಭೋಚಿತ ಮಾತನಾಡಿದರು.ನೆವಿಟೋಮೆರಿಟನ್ ಬಂದರು ಮಂಗಳೂರು ಇಲ್ಲಿನ ಸುರೇಶ್ ನೆಟ್ಟಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರಮಿಕ ಕಾರ್ಮಿಕರಿಗೆ ಸನ್ಮಾನ: ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ 33 ಮಂದಿ ಶ್ರಮಿಕ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಸೀತಾರಾಮ ಗೌಡ, ತಿಮ್ಮಪ್ಪ ಗೌಡ, ಧನಂಜಯ, ಬಾಲಚಂದ್ರ ಎನ್, ದಾಮೋದರ ಗೌಡ, ಎನ್.ಬಾಲಕೃಷ್ಣ, ಲಲಿತಾ, ಸಂತೋಷ್ ಎನ್, ಯತೀಶ್, ಯತೀಶ್ ಬಿ, ಶ್ರೀನಿವಾಸ್, ಉಪೇಂದ್ರ, ಭರತ್, ಕೃಷ್ಣ ಸಪಲ್ಯ, ಕೇಶವ್, ಶರತ್ ಕರ್ಕೇರ, ದಯಾನಂದ, ಸತ್ಯಾನಂದ, ವಿನೋದ್, ಸುನಿತ, ಕಮಲ, ರೋಹಿತ್, ಲೋಕೇಶ್, ಶರತ್, ಪ್ರವೀಣ್,ವಿನೋದಾ,ಲೋಹಿತ್ ಕುಮಾರ್, ತಿಲಕ್, ಮೋನಪ್ಪ, ಜಯಂತ ಗೌಡ, ಬೆಳಿಯಪ್ಪ ಗೌಡ, ದೇವಪ್ಪ ಗೌಡ, ಜನಾರ್ದನ,ರುಕ್ಮಯ ಅವರನ್ನು ಗೌರವಿಸಲಾಯಿತು.ವೇದಿಕೆಯ ಅತಿಥಿಗಳೊಂದಿಗೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಯದುಶ್ರೀ ಗೌಡ ಆನೆಗುಂಡಿ, ಹಿರಿಯ ನೌಕರರಾದ ನವೀನ್, ನಾರಾಯಣ, ಸಾವಿತ್ರಿ, ಕೇಶವ ಅಮೈ ಅವರ ಅಣ್ಣ ಶ್ರೀನಿವಾಸ್, ಕೇಶವ ಅಮೈ ಅವರ ತಾಯಿ ರಾಮಕ್ಕ, ಪತ್ನಿ ಮಾಲತಿ, ಸಹೋದರಿಯರಾದ ಸತ್ಯವತಿ, ಶ್ರೀಲತಾ ಕಾರ್ಮಿಕರನ್ನು ಸನ್ಮಾನಿಸಿದರು.ಚೇತನ್ ಆನೆಗುಂಡಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.ಕ್ರೀಡಾಕೂಟದ ಸಂಯೋಜಕ ದಿನೇಶ್ ನೆಟ್ಟಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಸ್‌ಆರ್‌ಕೆ ಲ್ಯಾಡರ್ಸ್‌ನ ರಜತ ಸಂಭ್ರಮಕ್ಕೆ ನಿರಂತರ ಕಾರ್ಯಕ್ರಮ ಮಾಡುವ ನಿಟ್ಟಿನಲ್ಲಿ ನವೆಂಬರ್ ತಿಂಗಳಲ್ಲಿ ಆರಂಭಗೊಂಡ ಕಾರ್ಯಕ್ರಮದಲ್ಲಿ 7ನೇ ಕಾರ್ಯಕ್ರಮವಾಗಿ ಕ್ರೀಡಾಕೂಟವನ್ನು ಮೇ 1ರಂದು ನಡೆಸಲಾಗಿದೆ.ನಮ್ಮ ಮಾಲಕರ ವಿಶೇಷ ಯೋಚನೆಯಾಗಿ ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಶ್ರಮಿಕ ಕಾರ್ಮಿಕರಿಗೆ ಗೌರವಾರ್ಪಣೆ ಮಾಡಲಾಗುತ್ತಿದೆ ಎಂದರು.ಸಂಸ್ಥೆಯ ಸಿಬ್ಬಂದಿಗಳಾದ ಮಮತಾ ಮತ್ತು ಭಾರತಿ ಪ್ರಾರ್ಥಿಸಿದರು.ರಕ್ಷಿತ್ ಆಚಾರ್ಯ ಸ್ವಾಗತಿಸಿದರು.ಕಾರ್ಮಿಕ ದಿನಾಚರಣೆಯ ಸಂಯೋಜಕ ಅಶೋಕ್ ವಂದಿಸಿದರು.ಮನೋಜ್ ಬಿ ಕಾರ್ಯಕ್ರಮ ನಿರೂಪಿಸಿದರು.ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು ಅವರ ನೇತೃತ್ವದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ್ ಕುಂತೂರು, ಪ್ರಫುಲ್ಲ ರಾಮಕುಂಜ ಕ್ರೀಡಾಕೂಟದ ತೀರ್ಪುಗಾರರಾಗಿ ಸಹಕರಿಸಿದರು.
ಕ್ರೀಡಾಕೂಟ ಉದ್ಘಾಟನೆ:
ಬೆಳಿಗ್ಗೆ ಕ್ರೀಡಾಕೂಟವನ್ನು ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರ ತಾಯಿ ರಾಮಕ್ಕ ಟಿ ದೀಪಪ್ರಜ್ವಲಿಸಿ ಉದ್ಘಾಟಿಸಿದರು.ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಯಧುಶ್ರೀ ಗೌಡ ಆನೆಗುಂಡಿ ಕ್ರೀಡಾಕೂಟದ ಧ್ವಜಾರೋಹಣ ಮಾಡಿದರು.ಹಿರಿಯ ಕಾರ್ಮಿಕ ನಾರಾಯಣ ನಾಯ್ಕ ತೆಂಗಿನ ಕಾಯಿ ಒಡೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.