ಪುಣಚ: ಪುಣಚ ಪರಿಯಾಲ್ತಡ್ಕ ಪ್ರಗತಿ ಕಾಂಪ್ಲೆಕ್ಸ್ ನಲ್ಲಿ ವಿಘ್ನೇಶ್ ಮೆಡಿಕಲ್ಸ್ ಮೇ.2ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಸೂರ್ಯ ಭಟ್ಟ್ ಕಲ್ಲುಕುಟ್ಟಿ ಮೂಲೆ ರವರ ಪೌರೋಹಿತ್ಯದಲ್ಲಿ ಪ್ರಾರ್ಥನೆಯೊಂದಿಗೆ ಮಹಾ ಗಣಪತಿ ಹೋಮ ನಡೆಯಿತು.
ಪುಣಚ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಆರ್ ರಂಗಮೂರ್ತಿ ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞರಾಗಿ, ಅಡಿಕೆ ಮಾರುಕಟ್ಟೆ ಸಂಶೋಧಕ ತಜ್ಞರಾಗಿರುವ ವಿಘ್ನೇಶ್ವರ ವರ್ಮಡಿ ಹಾಗೂ ಮನೆಯವರಿಂದ ನಡೆಸಲ್ಪಡುವ ಸಂಸ್ಥೆಗೆ ಶುಭ ಹಾರೈಸಿದರು. ಸದಸ್ಯ ಜಯಶ್ಯಾಂ ನೀರ್ಕಜೆ ಮಾತನಾಡಿ ಸಂಸ್ಥೆ ಜನರಿಗೆ ಉತ್ತಮ ಸೇವೆ ನೀಡಿ ಅಭಿವೃದ್ಧಿಯ ಪತದಲ್ಲಿ ಸಹಕಾರಿಯಾಗಿ ಎಲ್ಲರ ಆರೋಗ್ಯದಲ್ಲಿ ಸುಧಾರಣೆಯಾಗಲಿ ಎಂದು ಶುಭ ಹಾರೈಸಿದರು. ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ ಮಾತನಾಡಿ ಗ್ರಾಮೀಣ ಜನರಿಗೆ ಸಂಸ್ಥೆಯಿಂದ ಉತ್ತಮ ಸೇವೆ ಲಭಿಸಲಿ ಎಂದು ಶುಭ ಹಾರೈಸಿದರು.
ಸಚಿನ್ ಕೇಶವರವರ ತಂದೆ ಡಾ.ವಿಘ್ನೇಶ್ವರ ವರ್ಮುಡಿ ಮಾತನಾಡಿ ಗ್ರಾಮದಲ್ಲಿ ಸೇವೆ ನೀಡಿ ಎಲ್ಲರಿಗೂ ಉತ್ತಮ ಆರೋಗ್ಯ ಲಭಿಸಲಿ ಎಂಬ ಉದ್ದೇಶದಿಂದ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ.
ತಮ್ಮೆಲ್ಲರ ಸಹಕಾರ, ಪ್ರೋತ್ಸಾಹವಿರಲಿ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಪ್ರಗತಿ ಕಾಂಪ್ಲೆಕ್ಸ್ ನ ಮಾಲಕ ನಾರಾಯಣ ಪೂಜಾರಿ, ಪರಿಯಾಲ್ತಡ್ಕ ಶಾಲಾ ನಿವೃತ್ತ ಮುಖ್ಯ ಗುರು ಹರ್ಷ ಶಾಸ್ತ್ರಿ ಮಣಿಲ, ವಕೀಲ ಶಿವಪ್ರಸಾದ್ ಇ, ಉಲ್ಲಾಸ್, ನಾರಾಯಣ ಭಟ್ ಕುಪ್ಲುಚಾರು, ರಾಮಕೃಷ್ಣ ಬಿ, ಸಚಿನ್ ಕೇಶವರವರ ತಾಯಿ ಪೂರ್ಣಶ್ರೀ ವರ್ಮುಡಿ, ಪ್ರಜ್ಞಾರವರ ತಂದೆ ವಿಶ್ವೇಶ್ವರ ಭಟ್ ಸುಣ್ಣಂಬಳ, ತಾಯಿ ಕಮಲಾಕ್ಷಿ, ನಿತಿನ್ ಶಂಕರ್ ವರ್ಮುಡಿ, ಉಮಾದೀಪಿಕಾ, ಅಥರ್ವ ವಿಘ್ನೇಶ್, ಡಾl.ಗೌರಿಶಂಕರ್ ಸಿಕೆ, ಶ್ರೇಯಸ್ವಿ ವಿ, ಆದ್ಯಪ್ರಾಪ್ತಿ, ಆನ್ಯ ಪ್ರಣತಿ ಸೇರಿದಂತೆ ಹಲವಾರು ಗಣ್ಯರು, ಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.
ಸಂಸ್ಥೆಯ ಮಾಲಕರಾದ ಪ್ರಜ್ಞಾ ಕೆ ಹಾಗೂ ಸಚಿನ್ ಕೇಶವ ವರ್ಮುಡಿ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ಸಿಬ್ಬಂದಿ ವಿಶಾಲ ಎಂ.ಆರ್ ಸಹಕರಿಸಿದರು.