ಪುತ್ತೂರು: ಸ್ವಾತಂತ್ರ್ಯ ಭಾರದಲ್ಲಿ ಪ್ರಜೆಗಳು ಒಂದೇ ರೀತಿಯಲ್ಲಿ ಜೀವನ ಸಾಗಿಸಲು ಸಂವಿಧಾನ ನೀಡಿದ್ದಾರೆ. ಆದರೆ ತುಳುನಾಡಿನಲ್ಲಿ ಸಾವಿರ ವರ್ಷಗಳ ಹಿಂದೆಯೇ ಎಲ್ಲಾ ಸುಮುದಾಯದವರು ಒಟ್ಟು ಸೇರಲು ದೈವದ ಕೊಡಿಯಡಿಯ ಆಲೋಚನೆ ಮಾಡಿದ್ದರು. ದೈವದ ಕೊಡಿಯಡಿಯಲ್ಲಿ ಎಲ್ಲಾ ವರ್ಗದ ಜನರು ಏಕ ಮನಸ್ಸಿನಿಂದ ಒಟ್ಟು ಸೇರುತ್ತಿದ್ದಾರೆ. ಭಾರತಕ್ಕೆ ಸಂವಿಧಾನ ಇದ್ದಂತೆ ತುಳುವ ನಾಡಿಗೆ ದೈವದ ಕೊಡಿಯಡಿಯೇ ಸಂವಿಧಾನವಿದ್ದಂತೆ ಎಂದು ದೈವನರ್ತಕರು, ಸಿವಿಲ್ ಇಂಜಿನಿಯರ್ ಆಗಿರುವ ಡಾ ರವೀಶ್ ಪಡುಮಲೆ ಹೇಳಿದರು.
ನರಿಮೊಗರು ಗ್ರಾಮದ ಕೊಡಿನೀರು ಮಂಟಮೆ ಕೈಪಂಗಳ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಮೇ.1ರಂದು ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ದೈವರಾಧನೆಯಲ್ಲಿ ಎಲ್ಲರೂ ಒಟ್ಟು ಸೇರುತ್ತಾರೆ. ದೈವ ಅಭಯದ ಮೂಲಕ ನೀಡುವ ಪ್ರಸಾದ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆಯಿದೆ. ಆದರೆ ಇತ್ತೀಚಿನ ದಿನಗಳಲ್ಲಿ ದೈವಾರಧನೆಯು ದಾರಿ ತಪ್ಪುತ್ತಿದೆ ಎಂಬ ಮಾತು ಕೇಳುತ್ತಿದೆ. ಭಯ ಭಕ್ತಿ ಕಡಿಮೆಯಾಹಿದೆ. ಎಲ್ಲವೂ ಮನರಂಜನೆಯಾಗಿದೆ. ಇದಕ್ಕೆ ದೈವ ನರ್ತಕರು ಕಾರಣ ಮಾತ್ರ ಅಲ್ಲ. ಸೇವೆ ಮಾಡುವ ಹದಿನಾರು ವರ್ಗದವರು ಕಾರಣರು. ಎಲ್ಲಾ ವರ್ಗದವರು ಅವರವರ ಕರ್ತವ್ಯ ನಿಷ್ಠೆಯಿಂದ ಮಾಡಿದಾಗ ದಾರಿಬತಪ್ಪಲು ಸಾಧ್ಯವಿಲ್ಲ. ಸಾಮರಸ್ಯದ ಬದುಕು ನಮ್ಮದಾಗಬೇಕು.
ಯುವಜನತೆ ದುಶ್ಚಟ ಮುಕ್ತ ಸಮಜ ನಿರ್ಮಿಸಬೇಕು ಎಂದರು. ದೈವಕ್ಕೆ ಮಾಡುವ ಖರ್ಚು ಇನ್ನೊಂದು ರೂಪದಲಿ ಲಭಿಸುತ್ತದೆ. ಧರ್ಮ ಉಳಿಸುವ ಕಾರ್ಯ ನಮ್ಮೆಲ್ಲರಿಂದಾಗಬೇಕು. ಮೂರು ಗ್ರಾಮದವರು ಒಟ್ಟು ಸೇರಿ ದೈವದ ಬ್ರಹ್ಮಕಲಶೋತ್ಸವ ನೆವೇರಿಸಿದ್ದು ಎಲ್ಲರ ಮನೆ ದೀಪ ಆರಳಲಿದೆ ಎಂದರು.
ವೆಂಕಟರಮಣ ಗೌಡ ಕಳುವಾಜೆ ಮಾತನಾಡಿ, ದೈವ ದೇವರು ತುಳು ನಾಡಿನ ಸಂಸ್ಕೃತಿ. ದೈವ ಬೇರೆಯಲ್ಲ. ದೇವರು ಬೇರೆಯಲ್ಲ. ಆಚರಣೆಯಲ್ಲಿ ಮಾತ್ರ ಬದಲಾವಣೆ. ಯಾರೂ ಕನಿಷ್ಠರಲ್ಲ. ಯಾರೂ ಶ್ರೇಷ್ಠರಲ್ಲ. ಭಕ್ತಿ ಪ್ರದಾನವಾಗಿರಬೇಕು. ಆಚರಣೆಯಲ್ಲಿ ಆಡಂಬರ ಸಲ್ಲದು. ದೇವರಿಗೆ ಭಕ್ತಿ ಹಾಗೂ ನಿಷ್ಠೆ, ಭಕ್ತಿ ಮುಖ್ಯ ಎಂದರು.
ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ದೈವ ಆಡಂಬರ ಮೂಲಕ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಕ್ತಿ ಕಡಿಮೆಯಾಗಿದೆ. ಆಡಂಬರದ ಜೀವನದಲ್ಲಿ ಸಂಸ್ಕಾರ ಸಾಂಸ್ಕೃತಿ ಕಳೆಯುತ್ತಿದ್ದೇವೆ. ಹೀಗಾದರೆ ದೈವಸ್ಥಾನ ನಡೆಸುವುದು ಕಷ್ಟ. ಭಕ್ತಿಯಿಂದ ಸಲ್ಲಿಸಿದ ಸೇವೆ ದೈವ ದೇವರು ಸ್ವೀಕರಿ ಅಭಯ ನೀಡುತ್ತಾರೆ. ಬ್ರಹ್ಮಕಲಶೋತ್ಸವದ ಮೂಲಕ ಬಲಿಷ್ಠ ಸಂಘಟನೆಯಾಗಿ ಸಮಾಜಕ್ಕೆ ಶಕ್ತಿ ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎ.ವಿ ನಾರಾಯಣ ಅಲುಂಬುಡ ಮಾತನಾಡಿ, ನನಗೆ ಅನಿರೀಕ್ಷಿತವಾಗಿ ದೈವದ ಸೇವೆ ಮಾಡುವ ಭಾಗ್ಯ ದೊರೆತಿದೆ. ನೂತನ ದೈವಸ್ಥಾನದ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದ ಮೂರೇ ತಿಂಗಳಲ್ಲಿ ಕಾಮಗಾರಿಪೂರ್ಣಗೊಂಡಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದ ನೇಮವೂ ನೆರವೇರಿದೆ. ಇದಕ್ಕೆ ಜಾಗದ ದಾನಿಗಳು, ವಸ್ತು ರೂಪ, ಆರ್ಥಿಕ ಹಾಗೂ ಕರಸೇವೆಯ ಮೂಲಕ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಮುಂದೆ ಪ್ರತಿವರ್ಷ ದೈವದ ನೇಮ ನಡೆಯಲಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು ಪ್ರಾಸ್ತಾವಿಕವಾಗಿ ಮಾತನಾಡಿ, ಜೀರ್ಣಾವಸ್ಥೆಯಲ್ಲಿದ್ದ ಸಾನಿಧ್ಯವನ್ನು ದೈವಜ್ಙ ಸ್ವಾಮಿನಾಥನ್ ಪಣಿಕ್ಕರ್ ಮೂಲಕ ಪ್ರಶ್ನಾ ಚಿಂತನೆ ನಡೆಸಿದಾಗ ಮೂಲ ದೈವ ಗ್ರಾಮ ದೈವ ಶಿರಾಡಿ ಕಂಡುಬಂದಿದೆ. ಇದರ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರ ಸಭೆ ನಡೆಸಿ ಸಮಿತಿ ರಚಿಸಲಾಗಿದೆ. ದೈವದ ಮೂಲ ಜಾಗವು ರೈಲ್ವೆಯ ಅಧೀನದಲ್ಲಿದ್ದು ಮುಂದೆ ಸಮಸ್ಯೆ ಬಾರದಂತೆ ಪ್ರಶ್ನಾ ಚಿಂತನೆ ನಡೆಸಿ ಜಾಗ ಬದಲಾಯಿಸಲಾಗಿದ್ದು ವಿಶ್ವನಾಥ ಆಳ್ವರವರು ಸ್ಥಳದಾನ ಮಾಡಿದ್ದರು. ಗ್ರಾಮಸ್ಥರನ್ನು ಒಟ್ಟು ಸೇರಿಸಿಕೊಂಡು ಅವರ ಸಹಕಾರದಿಂದ ನಂತರದ 2-3 ತಿಂಗಳಲ್ಲಿ ಕಾಮಗಾರಿ ಪೂರ್ಣವಾಗಿದೆ. ಗ್ರಾಮ ದೈವಕ್ಕೆ ಗ್ರಾಮದಿಂದ ಮರಮುಟ್ಟು ಸಂಗ್ರಹ. ಎಲ್ಲವೂ ದೈವದ ಇಚ್ಚೆಯಂತೆ ನಡೆದಿದೆ. ಎಲ್ಲರ ನೆರವಿನಿಂದ ಅಚ್ಚುಕಟ್ಟಾಗಿ ನಡೆಯುವಲ್ಲಿ ಸಹಕಾರಿಯಾಗಿದೆ ಎಂದರು.
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಡಳಿತ ಸಮಿತಿ ಗೌರವಾಧ್ಯಕ್ಷ ಯತಿರಾಜ್ ಜೈನ್ ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಮುಂಡೂರು ಶ್ರೀಮೃತ್ಯಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ, ಸ್ಥಳದಾನಿ ಪುಡ್ಕಜೆ ವಿಶ್ವನಾಥ ಆಳ್ವ ಕೊಡಿನೀರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಕಾಷ್ಠಶಿಲ್ಪಿ ವಾಸುದೇವ ಆಚಾರ್ಯ, ಶಿಲ್ಪಿ ನವೀನ, ಮೇಸ್ತ್ರೀ ಕುಶಾಲಪ್ಪ ಗೌಡ ಸೇರಾಜೆ, ಮಹಾ ದಾನಿಗಳಾದ ಸದಾನಂದ ಶೆಟ್ಟಿ, ಶ್ಯಾಮಪ್ರಸಾದ್ ಜೋಗಿಬೆಟ್ಟು, ಪುಡ್ಕಜೆ ವಿಶ್ವನಾಥ ಆಳ್ವ ಕೊಡಿನೀರು, ಎ.ವಿ ನಾರಾಯಣ ಅಲುಂಬುಡ, ಸುಂದರ ಗೌಡ ನಡುಬೈಲು, ಯತಿರಾಜ್ ಜೈನ್ ಕೈಪಂಗಳ ಗುತ್ತುರವರನ್ನು ಸನ್ಮಾನಿಸಲಾಯಿತು. ದಾನಿಗಳು, ನಿತ್ಯ ಕರಸೇವಕರನ್ನು ಗೌರವಿಸಲಾಯಿತು.
ತುಂಗಲಕ್ಷ್ಮೀ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ಸ್ವಾಗತಿಸಿದರು. ಗೋಪಿನಾಥ ಆಳ್ವ ಕೊಡಿನೀರು, ಬೆಳಿಯಪ್ಪ ಗೌಡ ಕೆದ್ಕಾರ್, ಯೋಗೀಶ್ ನಾಕ್ ಗಡಿಪ್ಪಿಲ, ಪ್ರವೀಣ್ ಕುಲಾಲ್ ಮುಕ್ವೆ, ಮೋನಪ್ಪ ಮೂಲ್ಯ ಬಾರಿಕೆ, ತಿಮ್ಮಪ್ಪ ಗೌಡ ನಡುಬೈಲು, ಗಣೇಶ್ ಸಾಲ್ಯಾನ್ ಕೈಪಂಗಳ ದೋಳ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜಯರಾಮ ಪೂಜಾರಿ ಒತ್ತೆಮುಂಡೂರು ಹಾಗೂ ಸಿಬಂದಿ ನವ್ಯಾ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ನಾಕ್ ಸೇರಾಜೆ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆದು ನಂತರ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ನಾಗತಂಬಿಲ’ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಿತು.