ಪುತ್ತೂರು: ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಯೂನಿಯನ್ ವತಿಯಿಂದ ಕಾರ್ಮಿಕರ ದಿನಾಚರಣೆಯು ಮೇ.1ರಂದು ಕ್ಯಾಂಪ್ಕೋ ವಸತಿಗೃಹದ ಸಭಾಭವನದಲ್ಲಿ ನಡೆಯಿತು.
ಮುಖ್ಯ ಕ್ಯಾಂಪ್ಕೋ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಮಹೇಶ್ ಚೌಟ ಅವರು ಮಾತನಾಡಿ ಕ್ಯಾಂಪ್ಕೋ ಸಂಸ್ಥೆಯ ಸ್ಥಾಪನೆಯು ಕೃಷಿಕರ ಸಹಕಾರದಿಂದ ಆರಂಭಗೊಂಡು ಕೃಷಿಕರಿಗೆ ಕ್ಯಾಂಪ್ಕೋದಿಂದ ಆಗಿರುವ ಪ್ರಯೋಜವನ್ನು ತಿಳಿಸಿದರು.
ಅತಿಥಿಯಾಗಿ ಭಾಗವಹಿಸಿದ ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿಯ ಪ್ರೋಡಕ್ಷನ್ ಚೀಫ್ ಮೇನೇಜರ್ ಪ್ರಭಾಕರ್ ಅವರು ಮಾತನಾಡಿ ರಕ್ತದಾನ ಅವಶ್ಯಕತೆಯ ಕುರಿತು ಯೂನಿಯನ್ ಮೂಲಕ ಆಗಿರುವ ಸಹಕಾರವನ್ನು ನೆನಪಿಸಿಕೊಂಡರು. ಸಂಸ್ಥೆಯ ಮೇನೆಜರ್ ರಂಗನಾಥ್ ಬಿ.ಜಿ ಅವರು ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯೂನಿಯನ್ ಗೌರವ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿಯವರು ಸಂಸ್ಥೆಯ ಪ್ರಾರಂಭದ ದಿನಗಳನ್ನು ನೆನಪಿಸಿದರು.
ಸನ್ಮಾನ:
ಕ್ಯಾಂಪ್ಕೋ ಸಂಸ್ಥೆಯಿಂದ ಕಳೆದ ಸಾಲಿನಲ್ಲಿ ನಿವೃತ್ತಿಯಾದ ನಾರಾಯಣ ನಾಯ್ಕ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದ ಯೂನಿಯನ್ ಆಡಳಿತ ಮಂಡಳಿಯ ನಿರ್ದೇಶಕ ಕಿರಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕಾರ್ಮಿಕರ ದಿನಾಚರಣೆಯ ಕುರಿತು ಕ್ಯಾಂಪ್ಕೋ ಅಧ್ಯಕ್ಷರು, ನಿರ್ದೇಶಕರು, ಕಾನೂನು ಸಲಹೆಗಾರರು ಶುಭ ಹಾರೈಸಿ ಕಳುಹಿಸಿದ ಸಂದೇಶವನ್ನು ಸಭೆಯಲ್ಲಿ ತಿಳಿಸಲಾಯಿತು. ಯೂನಿಯನ್ ನ ಅಧ್ಯಕ್ಷ ಸಂತೋಷ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅನನ್ಯ ಪ್ರಾರ್ಥಿಸಿದರು. ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಯೂನಿಯನ್ ಕಾರ್ಯದರ್ಶಿ ಪ್ರಕಾಶ್ ಸ್ವಾಗತಿಸಿದರು. ಯೂನಿಯನ್ ಖಜಾಂಚಿ ಬಾಲಕೃಷ್ಣ ಐ ಆರ್ ವಂದಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಾತ್ವಿಕ್ ಪ್ರಭು ಅವರಿಂದ ಕೊಳಲು ವಾದನ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾಯಕ್ರಮ ನಡೆಯಿತು.