





ಕಾಣಿಯೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉಪ್ಪುಂದ ಜನತಾ ಕಾಲನಿಗೆ ಭೇಟಿ ಮಾಡಿ ಚಾವಡಿ ಸಭೆ ನಡೆಸಲಾಯಿತು.



ಈ ಸಂದರ್ಭದಲ್ಲಿ ಬೈಂದೂರಿನ ಶಾಸಕ ಗುರುರಾಜ ಗಂಟಿಹೊಳೆ ಅವರ ಪತ್ನಿ ಅನುರಾಧ, ಪಕ್ಷದ ಜಿಲ್ಲಾ ಎಸ್ ಸಿ ಮೊರ್ಚಾ ಅಧ್ಯಕ್ಷ ಅಶೋಕ ಗಂಗೊಳ್ಳಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಬೈಂದೂರು, ದ.ಕ ಜಿಲ್ಲಾ ಸಾಮಾಜಿಕ ಜಾಲಾತಾಣ ಪ್ರಕೋಷ್ಠದ ಸದಸ್ಯ ಪ್ರಸಾದ್ ಕಾಟೂರು. ಕಾರ್ಯಕರ್ತರಾದ ಅಂಶಿತ್ ದೊಳ್ತಿಲ,ಕೀರ್ತನ್,ಧಿರೇಶ್, ಉಪಸ್ಥಿತರಿದ್ದರು.














