ಮಂಗಳೂರು: 2024ನೇ ಸಾಲಿನ ಹಜ್ ಯಾತ್ರೆಗೆ ದ.ಕ ಮತ್ತು ಉಡುಪಿ ಜಿಲ್ಲೆಯಿಂದ ಹೊರಡುವ ಯಾತ್ರಿಗಳಿಗೆ ಹಜ್ ತರಬೇತಿ ಶಿಬಿರ ಮಂಗಳೂರಿನ ಝೀನತ್ ಭಕ್ಷ್ ಯತೀಂ ಖಾನಾದಲ್ಲಿ ಮೇ.4ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಿದ್ದರು.
ರಾಜ್ಯ ಹಜ್ ಸಮಿತಿಯ ಸದಸ್ಯರಾದ ಸೈಯದ್ ಅಶ್ರಫ್ ತಂಙಳ್ ಆದೂರು ದುವಾದೊಂದಿಗೆ ಶಿಬಿರವನ್ನು ಉದ್ಘಾಟಿಸಿದರು.
ಹಜ್ ತರಬೇತಿ ಶಿಬಿರಯನ್ನು ಬ್ಯಾರಿ ಭಾಷೆಯಲ್ಲಿ ಅಲ್ ಹಾಜ್ ಹಂಝಾ ಸಖಾಫಿ ಬಂಟ್ವಾಳ ಹಾಗೂ ಉರ್ದುವಿನಲ್ಲಿ ಮೌಲಾನ ಮಕ್ಬೂಲ್ ಹಝ್ರತ್ ನೆರವೇರಿಸಿದರು.
ಕೇಂದ್ರ ಹಜ್ ಕಮಿಟಿಯ ಅಧ್ಯಕ್ಷರಾದ ಹಾಜಿ ಎ.ಪಿ. ಅಬ್ದುಲ್ಲಾ ಕುಟ್ಟಿ ಹಾಗೂ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಹಾಜಿ ನಾಸೀರ್ ಲಕ್ಕಿ ಸ್ಟಾರ್ ಸಂದರ್ಭೊಚಿತವಾಗಿ ಮಾತನಾಡಿದರು.
ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಫಕೀರಬ್ಬ ಮಾಸ್ಟರ್, ಯತೀಂಖಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ರಶೀದ್, ಉಪಾಧ್ಯಕ್ಷರಾದ ಹಾಜಿ ಮುಸ್ತಫಾ, ಕೋಶಾಧಿಕಾರಿ ತಮೀಮ್, ಸದಸ್ಯರಾದ ರಹ್ಮತುಲ್ಲಾ, ಜುಮಾ ಮಸೀದಿಯ ಟ್ರಸ್ಟಿ ಅದ್ದು ಹಾಜಿ, ಅಝೀಝ್ ಬೈಕಂಪಾಡಿ ಮೊದಲಾದವರು ಉಪಸ್ಥಿತರಿದ್ದರು.