ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಜೆ ಅನವುಗಾರ್ ಕುಟುಂಬದ ತರವಾಡು ಮನೆ ಪ್ರವೇಶೋತ್ಸವ, ನಾಗಪ್ರತಿಷ್ಠೆ, ರಕ್ತೇಶ್ವರಿ, ಧರ್ಮದೈವ ಪಂಜುರ್ಲಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಮೇ.2ರಿಂದ 4ರವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಜೆ ತರವಾಡು ಮನೆಯಲ್ಲಿ ನಡೆಯಿತು.
ತರವಾಡು ಮನೆ ಪ್ರವೇಶ, ದೈವಗಳ ಪ್ರತಿಷ್ಠೆ:
ಮೇ.2ರಂದು ಸಂಜೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ಸ್ಥಳ ಶುದ್ಧಿ, ಪುಣ್ಯಾಹವಾಚನ, ರಕ್ಷೋಘ್ನ ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, ಪ್ರಸಾದ ವಿತರಣೆ, ರಾತ್ರಿ ಅನ್ನಸಂತರ್ಪಣೆ ನಡೆಯಿತು. ಮೇ.3ರಂದು ಬೆಳಿಗ್ಗೆ 8ರಿಂದ ಗಣಪತಿ ಹೋಮ, ರೆಂಜ ಶಬರಿ ಮಹಿಳಾ ಭಜನಾ ಸಂಘದಿಂದ ಭಜನೆ, ಶ್ರೀವೆಂಕಟರಮಣ ದೇವರ ಮುಡಿಪು ಪೂಜೆ, ರಕ್ತೇಶ್ವರಿ, ಗುಳಿಗ, ನಾಗಪ್ರತಿಷ್ಠೆ ನಡೆಯಿತು. ಬಳಿಕ ಬ್ರಹ್ಮಕಲಶ ಪೂಜೆ, ಗಂಟೆ 11.51ರ ಕರ್ಕಾಟಕ ಲಗ್ನ ಸುಮುಹೂರ್ತದಲ್ಲಿ ತರವಾಡುಮನೆ ಗೃಹಪ್ರವೇಶ, ಧರ್ಮದೈವ, ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.
ಧರ್ಮದೈವ, ಪರಿವಾರ ದೈವಗಳ ನೇಮೋತ್ಸವ:
ಮೇ.3ರಂದು ಸಂಜೆ 6ರಿಂದ ದೈವಗಳ ಭಂಡಾರ ತೆಗೆದು ಎಣ್ಣೆಬೂಳ್ಯ ನೀಡುವುದು, ಧರ್ಮದೈವ ವರ್ಣರ ಪಂಜುರ್ಲಿಗೆ ಉಗ್ರದಲ್ಲಿ ಎಣ್ಣೆಬೂಳ್ಯ ನೀಡುವುದು, ರಾತ್ರಿ ಅನ್ನಸಂತರ್ಪಣೆ ಬಳಿಕ ಕಲ್ಲುರ್ಟಿ, ಕುಪ್ಪೆಪಂಜುರ್ಲಿ ದೈವದ ನರ್ತನ ಸೇವೆ ನಡೆಯಿತು. ಮೇ.4ರಂದು ಬೆಳಿಗ್ಗೆ 7ರಿಂದ ಕುಟುಂಬದ ಧರ್ಮದೈವ ವರ್ಣರ ಪಂಜುರ್ಲಿಯ ನರ್ತನ ಸೇವೆ ಬಳಿಕ ಗುಳಿಗ ದೈವದ ನರ್ತನ ಸೇವೆ ನಡೆದು ಅನ್ನಸಂತರ್ಪಣೆ ನಡೆಯಿತು.
ಶಾಸಕರು, ಗಣ್ಯರು ಭೇಟಿ:
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಳ್ಯೊಟ್ಟು, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ರಾಧಾಕೃಷ್ಣ ಬೋರ್ಕರ್, ಪುರುಷೋತ್ತಮ ಮುಂಗ್ಲಿಮನೆ, ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ, ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು ಸೇರಿದಂತೆ ಬೆಟ್ಟಂಪಾಡಿ, ನಿಡ್ಪಳ್ಳಿ ಗ್ರಾಮದ ತರವಾಡು ಕುಟುಂಬಗಳ ಮುಖ್ಯಸ್ಥರು, ಸ್ಥಳೀಯ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಅತ್ಯುತ್ತಮ ವ್ಯವಸ್ಥೆ:
ಕಜೆ ಕುಟುಂಬಸ್ಥರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಆಗಮಿಸಿದವರಿಗೆ ನೀರು, ಬೆಲ್ಲ, ಪಾನಕ, ಶರಬತ್ತು ನೀಡಿ ಸತ್ಕರಿಸಲಾಯಿತು. ವಿಶಾಲವಾದ ಚಪ್ಪರ, ದೇಣಿಗೆ ನೀಡಲು ಕಾರ್ಯಾಲಯ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಗಣ್ಯರನ್ನು ಕುಟುಂಬದ ಪ್ರಮುಖರು ಶಾಲು ಹಾಕಿ ಗೌರವಿಸಿ ಪ್ರಸಾದ ನೀಡಿದರು. ರಾತ್ರಿ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ರೆಂಜ ಮಣಿಕಂಠ ಚೆಂಡೆ ಮೇಳದವರಿಂದ ಚೆಂಡೆವಾದನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಬು ಗುಮ್ಮಟೆಗದ್ದೆ ಬಳಗದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು.
ಕಜೆ ಅನವುಗಾರ್ ಕುಟುಂಬ ತರವಾಡು ಟ್ರಸ್ಟ್ ಗೌರವಾಧ್ಯಕ್ಷ ನಾರಾಯಣ ನಾಯ್ಕ ಕಜೆ, ಅಧ್ಯಕ್ಷ ಕೆ. ಸೇಸಪ್ಪ ನಾಯ್ಕ ಕಜೆ ಹಾಗೂ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ ಸಿ. ಸನ್ನಿಧಿ ಚೆಲ್ಯಡ್ಕ ರಾಜೀವಿ ಅಣ್ಣಪ್ಪ ನಾಯ್ಕ ಕಜೆ, ಸುಶೀಲ ಗೋವಿಂದ ನಾಯ್ಕ ಕೋಡಿಂಬಾಡಿ, ಸೀತಾ ರಘುನಾಥ ನಾಯ್ಕ ಚೆಲ್ಯಡ್ಕ, ವಾಸು ನಾಯ್ಕ ನೀರಪಳಿಕೆ ಸರಪಾಡಿ, ಶಿವಪ್ಪ ನಾಯ್ಕ ಕಜೆ, ಕೇಶವ ನಾಯ್ಕ ಕಜೆ, ಬಾಲಕೃಷ್ಣ ನಾಯ್ಕ ಕಜೆ, ಮೋನಪ್ಪ ನಾಯ್ಕ ಕಜೆ, ಗಿರೀಶ್ ನಾಯ್ಕ ನೀರಪಳಿಕೆ ಸರಪಾಡಿ, ದಾಮೋದರ ನಾಯ್ಕ ಕಜೆ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಒಡಿಯೂರು, ಮಾಣಿಲ, ಡಾ.ಚಾರುಕೀರ್ತಿ ಸ್ವಾಮೀಜಿ ಭೇಟಿ:
ಮೇ.2ರಂದು ರಾತ್ರಿ ಒಡಿಯೂರು ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಯವರು ಭೇಟಿ ನೀಡಿದರು. ಬಳಿಕ ಆಶೀರ್ವಚನ ನೀಡಿದರು. ಮೇ.3ರಂದು ಮಧ್ಯಾಹ್ನ ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಸ್ವಾಮೀಜಿ ಹಾಗೂ ಮೂಡಬಿದಿರೆ ಮಧುಬಿನ್ನವ ಶ್ರೀಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮೀಜಿ ಭೇಟಿ ನೀಡಿ ಆಶೀರ್ವಚನ ನೀಡಿದರು. ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಕಜೆ ಅನವುಗಾರ್ ಕುಟುಂಬ ತರವಾಡು ಟ್ರಸ್ಟ್ ಅಧ್ಯಕ್ಷ ಶೇಷಪ್ಪ ನಾಯ್ಕ ದಂಪತಿ ಸ್ವಾಮೀಜಿಯವರನ್ನು ತುಳಸಿ ಮಾಲೆ ಹಾಕಿ ಫಲಪುಷ್ಪ ನೀಡಿ ಗೌರವಿಸಿದರು.