ಪ್ರ.ಕಾರ್ಯದರ್ಶಿಯಾಗಿ ಇಬ್ರಾಹಿಂ ಹಾಜಿ, ಕೋಶಾಧಿಕಾರಿಯಾಗಿ ಕೆ.ಎಂ ಹನೀಫ್ ಮಾಡಾವು ಆಯ್ಕೆ
ಪುತ್ತೂರು: ನೂರುಲ್ ಹುದಾ ಜುಮಾ ಮಸಿದಿ ಅರಿಕ್ಕಿಲ ಇದರ ವಾರ್ಷಿಕ ಮಹಾಸಭೆ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆಯಲ್ಲಿ ಅರಿಕ್ಕಿಲ ಮದರಸ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾಗಿ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅವರು ಪುನರಾಯ್ಕೆಗೊಂಡರು.
ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಹಾಜಿ ಫ್ಯಾಮಿಲಿ, ಕೋಶಾಧಿಕಾರಿಯಾಗಿ ಕೆ.ಎಂ ಹನೀಫ್ ಮಾಡಾವು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಮೇರ್ಲ, ಈಸುಬು ಬಿ.ಕೆ ಹಾಗೂ ಎಂ.ಕೆ ಮಹಮ್ಮದ್ ಆಯ್ಕೆಯಾದರು. ಕಾರ್ಯದರ್ಶಿಯಾಗಿ ರಝಾಕ್ ಎಂ.ಕೆ ಹಾಗೂ ಹಮೀದ್ ಬೆಟ್ಟಂಪಾಡಿ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಅಬ್ಬಾಸ್ ಶಾರ್ಜ, ಅಬ್ದುಲ್ ಬಶೀರ್ ಮಾಸ್ಟರ್, ಹಮೀದ್ ಎ.ಎಚ್, ಹಂಝ ಎಂ.ಪಿ, ಮಹಮ್ಮದ್ ಬಿ.ಎಂ, ಅಬ್ದುಲ್ ರಹಿಮಾನ್ ಕುಂಬಕೋಡು, ಮಜೀದ್ ಹಾಜಿ, ಅಲೀ ಅಬ್ದುಲ್ಲ ಎಂ.ಕೆ, ಅಬೂಬಕ್ಕರ್ ಮಣ್ಣಾಪು, ಖಾದರ್ ಸಿ.ಕೆ, ಉಮ್ಮರ್ ಬಿ.ಕೆ ಆಯ್ಕೆಯಾದರು.
ಸಲಹೆಗಾರರಾಗಿ ಹಮೀದ್ ಹಾಜಿ ಬಿ.ಕೆ ಆಯ್ಕೆಯಾದರು. ಲೆಕ್ಕ ಪರಿಶೋಧಕರಾಗಿ ಇಸ್ಮಾಯಿಲ್ ಹೋನೆಸ್ಟ್ ಆಯ್ಕೆಯಾದರು. ಸ್ಥಳೀಯ ಖತೀಬ್ ಉಮರ್ ಮದನಿ ದುವಾ ನೆರವೇರಿಸಿದರು.