ಪುತ್ತೂರು ಜಾತ್ರೆ ಮುಗಿದ ಬಳಿಕ ಬ್ರಹ್ಮರಥ ಮಂದಿರಕ್ಕೆ ಸೇರಿದ ಬ್ರಹ್ಮರಥ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ತೀ ಮಹಾಲಿಂಗೇಶ್ವರ ದೇವರ ಜಾತ್ರೆಗೆಂದು ರಥ ಕಟ್ಟಲು ಮಾರ್ಚ್ ತಿಂಗಳಲ್ಲಿ‌ ಹೊರ ತಂದ ಬಳಿಕ ಜಾತ್ರೆ ಮುಗಿದು ರಥವನ್ನು ಬಿಚ್ಚಿದ ಬಳಿಕ ಮೇ.7ರಂದು ರಥ ಮಂದಿರಕ್ಕೆ ಸೇರಿಸಲಾಯಿತು.
ಜಾತ್ರೆಯ ಸಂದರ್ಭ ಬ್ರಹ್ಮರಥವನ್ನು ರಥ ಬೀದಿಗೆ ತಂದು ರಥ ಕಟ್ಟುವ ಕೆಲಸ ಮಾಡಲಾಗುತ್ತದೆ. ಜಾತ್ರೆ ಮುಗಿದ ಬಳಿಕ ರಥವನ್ನು ಬಿಚ್ಚು ಕೆಲಸ ಮೇ.6ಕ್ಕೆ ಪೂರ್ಣಗೊಂಡಿತು. ಇದೀಗ ಬ್ರಹ್ಮರಥವನ್ನು ಮಂದಿರಕ್ಕೆ ಸೇರಿಸಲಾಯಿತು. ಈ ಸಂದರ್ಭ ದೇವಳದ ಅರ್ಚಕ ಉದಯ ಭಟ್, ಇಂಜಿನಿಯರ್ ಪಿ ಜಿ ಜಗನ್ನಿವಾಸ ರಾವ್, ಪದ್ಮನಾಭ ಸಹಿತ ದೇವಳದ ರಥ ಕಟ್ಟುವ ಪರಿಚಾರಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here