ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ಶೇಕಡಾ 100 ಫಲಿತಾಂಶ – ಗರಿಷ್ಟ ನಿಶಾಂತ್ ಪಿ 588 ಅಂಕ – ಶಾಲೆಗೆ ಎ ಗ್ರೇಡ್

0

ಎಪ್ರಿಲ್ 2024 ರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಆಂಗ್ಲ ಮಾಧ್ಯಮದಲ್ಲಿ ಹಾಜರಾದ 31 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 17ನೇ ಬಾರಿ ಶೇಕಡಾ 100 ಫಲಿತಾಂಶ ದಾಖಲಾಗಿದೆ. ಎ+ 1, ಎ 6, ಬಿ+ 9, ಬಿ 10 ಹಾಗೂ 5 ವಿದ್ಯಾರ್ಥಿಗಳು ಸಿ+ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ. ಪ್ರಥಮ ಸ್ಥಾನವನ್ನು ಪ್ರಕೃತಿ ವಿ ರೈ – 584 (ದರ್ಬೆ ಪಾಂಗ್ಲಾಯಿ ಶಿಕ್ಷಕಿ ಚಿತ್ರಾ ವಿಠಲ್ ರೈ ಯವರ ಪುತ್ರಿ) ದ್ವಿತೀಯ ಸ್ಥಾನವನ್ನು ಪ್ರತೀಕ್ಷಾ ಎಂ.ಪಿ – 555 (ಅರಿಯಡ್ಕ ಪ್ರವೀಣ್ ಕುಮಾರ್ ಮತ್ತು ಪ್ರೇಮಲತಾ ರವರ ಪುತ್ರಿ) ಮತ್ತು ತೃತೀಯ ಸ್ಥಾನವನ್ನು ಶ್ರೀವತ್ಸ ಬಿ-552 (ದೇವರಗದ್ದೆ ಮಂಜುನಾಥಯ್ಯ ಬಿ ಮತ್ತು ಮೀನಾಕ್ಷಿಯವರ ಪುತ್ರ) ಹಾಗೂ ಸುಜನ್ ಕುಮಾರ್ ಕೆ.ಆರ್ 541(ಕೈಮಣ ರಂಗ ಎ ಮತ್ತು ಕುಸುಮಾ ಕೆ ಯವರ ಪುತ್ರ) ಅಂಕಗಳನ್ನು ಪಡೆದಿರುತ್ತಾರೆ. ಕನ್ನಡ ಮಾಧ್ಯಮದಿಂದ ಪರೀಕ್ಷೆಗೆ ಹಾಜರಾದ 54 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 96.30 ಫಲಿತಾಂಶ ಪಡೆದಿದೆ. ಎ+ 1, ಎ 8, ಬಿ+ 7, ಬಿ 21, ಸಿ+ 10 ಹಾಗೂ 5 ವಿದ್ಯಾರ್ಥಿಗಳು ಸಿ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ. ಪ್ರಥಮ ಸ್ಥಾನವನ್ನು ನಿಶಾಂತ್ ಪಿ – 588 (ನೆಹರೂನಗರ ಸೂರ್ಯನಾರಾಯಣ ಭಟ್ ಪಿ ಮತ್ತು ವಿಜಯಲಕ್ಷಿ ಯವರ ಪುತ್ರ), ದ್ವಿತೀಯ ಸ್ಥಾನವನ್ನು ಅತೀಕ್ಷಾ – 550 (ಚಿಕ್ಕಮುಡ್ನೂರು ಕೃಷ್ಣಪ್ಪ ಗೌಡ ಮತ್ತು ಜಯಲಕ್ಷ್ಮಿ ಯವರ ಪುತ್ರಿ) ಮತ್ತು ತೃತೀಯ ಸ್ಥಾನವನ್ನು ವಿಜೇತಾ ಜೆ ರೈ – 536 (ಬೆಳ್ಳಿಪ್ಪಾಡಿ ಜಯಕರ ರೈ ಮತ್ತು ಗೀತಾ ಜೆ ರೈ ಯವರ ಪುತ್ರಿ) ಉತ್ತೀರ್ಣರಾಗಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮತ್ತು ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಎ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here