ಎಸ್.ಎಸ್.ಎಲ್.ಸಿ ಪರೀಕ್ಷೆ: ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ 100% ಫಲಿತಾಂಶ

0

ಪುತ್ತೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢ ಶಾಲಾ ವಿಭಾಗ) ಕುಂಬ್ರ ಇಲ್ಲಿ 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 26 ಬಾಲಕರು ಹಾಗೂ 20 ಬಾಲಕಿಯರು ಸೇರಿದಂತೆ ಒಟ್ಟು 46 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲಾ 46 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶಾಲೆಯು 100% ಫಲಿತಾಂಶವನ್ನು ಪಡೆದಿದೆ.

4 ವಿದ್ಯಾರ್ಥಿಗಳು “A” ಗ್ರೇಡ್, 10 ವಿದ್ಯಾರ್ಥಿಗಳು “B+” ಗ್ರೇಡ್, 13 ವಿದ್ಯಾರ್ಥಿಗಳು “C+” ಹಾಗೂ 5 ವಿದ್ಯಾರ್ಥಿಗಳು “C” ಗ್ರೇಡ್ ನೊಂದಿಗೆ ಉತ್ತೀರ್ಣಗೊಂಡು 77.67% ಗುಣಾತ್ಮಕ ಅಂಕಗಳೊಂದಿಗೆ ಶಾಲೆಯು “A”ಗ್ರೇಡ್ ಪಡೆದುಕೊಂಡಿದೆ. ಫಾತಿಮತ್ ಅಫ್ರೀನ 519 ಅಂಕಗಳೊಂದಿಗೆ ಪ್ರಥಮ ಸ್ಥಾನ, ಪ್ರಾರ್ಥನ್ ಕೆ 514 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಫಾತಿಮತ್ ಶರೀಫ 513 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here