ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಗೆ ಎಸ್.ಎಸ್.ಎಲ್.ಸಿ. ಯಲ್ಲಿ ನೂರು ಶೇಕಡಾ ಫಲಿತಾಂಶ

0

ಪುತ್ತೂರು: ನರಿಮೊಗರಿನ ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯು 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಯಲ್ಲಿ ಶೇಕಡಾ ನೂರು ಫಲಿತಾಂಶವನ್ನು ಪಡೆದುಕೊಂಡಿದೆ. ಒಟ್ಟು 81 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು 18 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 52 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು:
ಪಿ.ಕೆ.ರಕ್ಷಿತ್-597(95.52%), ತೃಷಾ.ಕೆ.ಆರ್-578(92.48%), ದೃತಿ.ಬಿ.ಎಸ್-575(92%), ಚಿನ್ಮಯಿ ಪುತ್ತಿಲ-574(91.84%), ತ್ವಿಷಾ. ಎಸ್-573(91.68%), ಕೌಶಿಕ್.ಕೆ-573(91.68%), ಶ್ರವಣ ಶ್ಯಾಮ.ಕೆ.ಎನ್-568(90.88%), ತನ್ವಿ.ಎಸ್.ಡಿ-558(89.28%), ಪ್ರಥಮ್.ಕೆ.ಜೆ-542(86.72%), ಅಕ್ಷಯ್.ಕೆ-539(86.24%), ಭವಿತ್.ಎಂ-539(86.24%), ಬಿಂದುಶ್ರೀ.ಎ.ಬಿ-539(86.24%), ಪ್ರಜ್ವಲ್.ಎಚ್.ಎಚ್-539(86.24%), ಸಿಂಚನ್.ಸಿ.ರೈ-537(85.92%), ಪೂರ್ವಿ.ಬಿ.ಎಚ್-536(85.76%), ಸೂರಜ್ ಶೆಟ್ಟಿ-534(85.44%), ಪಿ.ಸಿದ್ಧಾಂತ್-533(85.28%), ಸಹನ್.ಜೆ.ಕೆ-532(85.12%)
ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ, ಸಂಚಾಲಕರಾದ ಶ್ರೀ ಭಾಸ್ಕರ ಆಚಾರ್ ಹಿಂದಾರು, ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಮಾಲ.ವಿ.ಎನ್ ಅಭಿನಂದನೆಗಳನ್ನು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here