ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ ಸತತ 8 ನೇ ಬಾರಿ ಶೇ. 100 ಫಲಿತಾಂಶ

0

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯಾದ ಬೆಟ್ಟಂಪಾಡಿಯ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಗೆ ಸತತ 8 ನೇ ಬಾರಿಗೆ ಶೇ. 100 ಫಲಿತಾಂಶ ಪಡೆದುಕೊಂಡಿದೆ. 23 ವಿದ್ಯಾರ್ಥಿಗಳ ಪೈಕಿ 12 ಮಂದಿ ವಿಶಿಷ್ಟ ಶ್ರೇಣಿ, 11 ಮಂದಿ ಪ್ರಥಮ ಶ್ರೇಣಿ ಯಲ್ಲಿ ಉತ್ತೀರ್ಣಗೊಂಡಿರುತ್ತಾರೆ. 602 ಅಂಕ ಪಡೆದಿರುವ ಹೇಮಂತ್ ಕುಮಾರ್ ಕೆ. ವೈ. (ಕೃಷ್ಣಪ್ಪ ಕುಲಾಲ್ ಉಡ್ಡಂಗಳ ಮತ್ತು ಯಶೋಧ ದಂಪತಿ ಪುತ್ರ) ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ ಎಂದು ಶಾಲಾ ಮುಖ್ಯಗುರು ರಾಜೇಶ್ ಎನ್. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here