ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀಬಸವೇಶ್ವರ, ಮಲ್ಲಮ್ಮ ಜಯಂತಿ ದಿನಾಚರಣೆ

0

ಕಾಯಕ ತತ್ವಕ್ಕೆ ಮಹತ್ವ ನೀಡಿದ ಕ್ರಾಂತಿಕಾರಿ ಪುರುಷ – ಕುಂಞಿ ಅಹಮ್ಮದ್

ಪುತ್ತೂರು: ಬಸವಣ್ಣನವರು ಒಬ್ಬ ಕವಿ, ದಾರ್ಶನಿಕ, ಉತ್ತಮ ಆಡಳಿತಗಾರನಾಗಿ 12ನೇ ಶತಮಾನದಲ್ಲಿ ಗುರುತಿಸಿಕೊಂಡವರು. ಶೈಕ್ಷಣಿಕ ಹೋರಾಟ ಮಾಡಿದ ಕ್ರಾಂತಿಕಾರಿ ಪುರುಷ. ವಚನಗಳ ಮೂಲಕ ವ್ಯವಸ್ಥೆಯನ್ನು ಬಲಪಡಿಸಿದ ಮಹಾನ್ ಚೇತನ ಎಂದು ಪುತ್ತೂರು ತಹಶೀಲ್ದಾರ್ ಕುಂಞಿ ಅಹಮ್ಮದ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಮೇ.10ರಂದು ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ಕಛೇರಿಯ ನ್ಯಾಯಾಲಯದ ಸಭಾಭವನದಲ್ಲಿ ನಡೆದ ಶ್ರೀಬಸವೇಶ್ವರ ಜಯಂತಿ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಬಸವಣ್ಣನವರು ಕಾಯಕ ತತ್ವಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ತನ್ನ ವಚನಗಳಲ್ಲಿ ಕಾಯಕವೇ ಕೈಲಾಸ, ಕೆಲಸ ಮಾಡಿದರೆ ಬದುಕಬಹುದು ಎಂದು ಹೇಳಿದ್ದಾರೆ. ಅನುಭವ ಮಂಟಪದ ಮೂಲಕ ಸಂಸತ್ತನ್ನು ಸ್ಥಾಪನೆ ಮಾಡಿ ಹೆಣ್ಣುಮಕ್ಕಳಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಎಲ್ಲಾ ಸರಕಾರಿ ಕಛೇರಿಗಳಲ್ಲಿ ಬಸವಣ್ಣನವರ ಫೋಟೋ ಹಾಕುವ ಮೂಲಕ ಅವರ ಆದರ್ಶವನ್ನು ಪಾಲಿಸಬೇಕು. ಬಿಜ್ಜಳನ ಆಸ್ಥಾನದಲ್ಲಿದ್ದ ಬಸವಣ್ಣನವರು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದವರು. ಅಲ್ಲದೆ ಅನ್ನದಾಸೋಹವನ್ನು ಆರಂಭ ಮಾಡಿದ್ದಾರೆ ಹಾಗೂ ಎಲ್ಲರಿಗೂ ಸಮಾನತೆಯನ್ನು ನೀಡಿದವರು ಎಂದು ಹೇಳಿ ಬಸವಣ್ಣನವರ ಶಿವಶರಣೆ ಮಲ್ಲಮ್ಮರವರ ಆದರ್ಶವನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಆಡೋಣ ಎಂದು ಹೇಳಿದರು.

ನಗರಸಭಾ ಪೌರಾಯುಕ್ತ ಬದ್ರುದ್ದೀನ್ ಸೌದಾಗರ್, ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ಸುಲೋಚನಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ತಾಲೂಕು ಕಛೇರಿಯ ದಯಾನಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here