ಉದನೆ: ಮನೋಜ್ ಹೋಟೆಲ್ ಮಾಲಕ ಜೋಸೆಫ್ ನಿಧನ

0

ನೆಲ್ಯಾಡಿ: ಶಿರಾಡಿ ಗ್ರಾಮದ ಉದನೆ ಸಮೀಪದ ಕಳಪ್ಪಾರು ನಿವಾಸಿ, ಉದನೆಯಲ್ಲಿನ ಮನೋಜ್ ಹೋಟೆಲ್ ಮಾಲಕ ಜೋಸೆಫ್ ಪುತ್ತನ್ ಪರಂಬಿಲ್(75 ವ.) ಅವರು ಅಲ್ಪಕಾಲದ ಅನಾರೋಗ್ಯದಿಂದ ಮೇ.10ರಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಜೋಸೆಫ್ ಅವರು ಕಳೆದ 40 ವರ್ಷಗಳಿಂದ ಉದನೆಯಲ್ಲಿ ಮನೋಜ್ ಎಂಬ ಹೆಸರಿನಲ್ಲಿ ಹೋಟೆಲ್ ನಡೆಸುತ್ತಿದ್ದರು. ಅನಾರೋಗ್ಯದ ಕಾರಣದಿಂದಾಗಿ ಕೆಲವು ಸಮಯಗಳಿಂದ ವ್ಯವಹಾರ ನಿಲ್ಲಿಸಿದ್ದರು.
ಮೃತರು ಪತ್ನಿ ಮೇರಿ ಜೋಸೆಫ್, ಪುತ್ರರಾದ ನೆಲ್ಯಾಡಿಯ ತೋಮ್ಸನ್ ಎಲೆಕ್ಟ್ರಿಕಲ್ಸ್ ಮಾಲಕ ಮನೋಜ್, ಲೆಫ್ಟಿನೆಂಟ್ ಕರ್ನಲ್ ಆಗಿರುವ ವಿನೋಜ್, ಅನುರಾಜ್, ದುಬೈನಲ್ಲಿ ಇಂಜಿನಿಯರ್ ಆಗಿರುವ ಜಯರಾಜ್ ಹಾಗೂ ಪುತ್ರಿ ಬೆನಿಜಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here