ಎಸ್‌ಎಸ್‌ಎಲ್‌ಸಿ: ಕುಂತೂರು ಮಾರ್ ಇವಾನಿಯೋಸ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ-12 ಡಿಸ್ಟಿಂಕ್ಷನ್

0

ಪೆರಾಬೆ: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಕುಂತೂರು ಮಾರ್ ಇವಾನಿಯೋಸ್ ಆಂಗ್ಲಮಾಧ್ಯಮ ಶಾಲೆಗೆ ಶೇ.100 ತೇರ್ಗಡೆ ಫಲಿತಾಂಶ ಲಭಿಸಿದೆ.
ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 24 ವಿದ್ಯಾರ್ಥಿಗಳೂ ತೇರ್ಗಡೆಗೊಂಡಿದ್ದು ಶೇ.100 ಫಲಿತಾಂಶ ಬಂದಿದೆ. 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಹಾಗೂ 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ತೀಕ್ಷ್ಣವಿ 589, ಶೌರಿ ಯು ಕುಮಾರ್ 585, ಅಪೇಕ್ಷಾ 583, ಅವನಿ ಸಿ.ಪಿ. 582, ಶ್ರೀಶಕೃಷ್ಣ ಬಿ ರೈ 579, ನಿತಿಶ 575, ಅನ್ವಿತ 562, ಎ.ಜೆ.ಶ್ರದ್ಧಾ 553, ಮಹಮ್ಮದ್ ಅಶ್ಪಾನ್ 552, ಶಿಲ್ಪಾ ಸಿ.ಎಸ್.540, ಶಾನ್ ಒ.ಬಿ. 539, ಖತೀಜ ಸಫಾ 537 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here