ಪುತ್ತೂರು: ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಸೆಂಟ್ರಲ್ ರಿಸರ್ಚ್ ಲ್ಯಾಬೋರೇಟರಿಯಾ ಪ್ರದಾನ ವೈಜ್ಞಾನಿಕ ಅಧಿಕಾರಿಯಾಗಿ, ಡಾ.ಸುಚೇತ ಕುಮಾರಿಯವರು ಜಾಗತಿಕ ಮಟ್ಟದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲು ಸ್ಥಾನ ಪಡೆದಿದ್ದಾರೆ.
ಅಮೇರಿಕಾದ ಸ್ಮಾನ್ನೊರ್ಡ್ ವಿವಿಯ ಎಲೇವಿಯರ್ ಮುದ್ರಣ ಸಂಸ್ಥೆಯ ಸಹಭಾಗಿತ್ವದಲ್ಲಿ ಹೊರತಂದಿರುವ ವಿಶ್ವದ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲೂ ಸ್ಥಾನ ಸಂಶೋಧನ ಲೇಖನಗಳು, ಉಲ್ಲೇಖಗಳು, ಎಚ್-ಇಂಡೆಕ್ಸ್ ಇನ್ನಿತರ ಸ್ಥಾನ ಪಡೆದಿದ್ದಾರೆ. ಸಂಯೋಜಿತ ಮಾನದಂಡಗಳನ್ನು ಆಧರಿಸಿ ಒಂದು ಲಕ್ಷ ವಿಜ್ಞಾನಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
2024 ಸಾಲಿನ ಸಂಶೋಧಕರು ನಡೆಸಿದ ಸಮೀಕ್ಷೆಯಲ್ಲಿ ಜೀವರಸಾಯನಶಾಸ್ತ್ರದ ಕ್ಷೇತ್ರದಲ್ಲಿ ಸ್ಥಾನವನ್ನು ಗಳಿಸಿದ್ದಾರೆ. ಇವರು ಪ್ರಸ್ತುತ ಮಂಗಳೂರು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾಗಿರುತ್ತಾರೆ.