





ಕಾಣಿಯೂರು : : ಕಡಬ ತಾಲೂಕಿನ ಎಡಮಂಗಲ ಎಂಬಲ್ಲಿ ಶನಿವಾರ ರೈಲು ಹಳಿ ದಾಟುತ್ತಿದ್ದ ರೈಲ್ವೇ ಇಲಾಖೆಯ ನಿವೃತ್ತ ನೌಕರ ಎಡಮಂಗಲದ ಡೆಕ್ಕಳ ನಿವಾಸಿ ಮಹಾಲಿಂಗ ನಾಯ್ಕ್ (68 ವ.) ಎಂಬವರಿಗೆ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲಿ ಮೃತಪಟ್ಟಿದ್ದಾರೆ.


ಮೃತರಿಗೆ ಕಿವಿ ಸರಿಯಾಗಿ ಕೇಳಿಸುತ್ತ ಇರಲಿಲ್ಲ ಎನ್ನಲಾಗಿದ್ದು, ಮಳೆ ಬರುತ್ತಿದ್ದ ಹಿನ್ನಲೆಯಲ್ಲಿ ಮನೆ ಕಡೆಗೆ ಹೋಗಲೆಂದು ರೈಲು ಹಳಿ ದಾಟುತ್ತಿದ್ದ ವೇಳೆ ಮಂಗಳೂರಿನಿಂದ ಬಿಜಾಪುರ ತೆರಳುವ ಬಿಜಾಪುರ ಎಕ್ಸ್ ಪ್ರೆಸ್ ರೈಲು ಇವರಿಗೆ ಡಿಕ್ಕಿಯಾಗಿದೆ. ಮಹಾಲಿಂಗ ನಾಯ್ಕರವರ ದೇಹವನ್ನು ಸುಮಾರು 1 ಕಿ.ಮೀ. ವರೆಗೆ ರೈಲು ಎಳೆದುಕೊಂಡು ಹೋಗಿದ್ದು ದೇಹ ಗುರುತು ಹಿಡಿಯಲಾರದಷ್ಟು ಛಿದ್ರಗೊಂಡಿತ್ತು ಎಂದು ವರದಿಯಾಗಿದೆ.














