ಕಾರ್ಮಿಕ ಮುಖಂಡ ಶಿವಕುಮಾರ್ ಅಂತ್ಯಕ್ರಿಯೆ

0

ಅರಿಯಡ್ಕ: ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ, ತಮಿಳು ಕಾರ್ಮಿಕ ಮುಖಂಡ ಶಿವಕುಮಾರ್ ಕೌಡಿಚ್ಚಾರು ರಸ್ತೆ ಅಪಘಾತದಲ್ಲಿ ಮೇ.10 ರಂದು ಬೆಳಗಾವಿಯ ಖಾನಾಪುರದಲ್ಲಿ ನಿಧನ ಹೊಂದಿದ್ದು, ಮೃತರ ಪಾರ್ಥಿವ ಶರೀರವನ್ನು ಮೇ 12 ರಂದು ಕೌಡಿಚ್ಚಾರಿನ ಮೃತರ ಸ್ವಗೃಹಕ್ಕೆ ತರಲಾಯಿತು.ನೂರಾರು ಸಂಖ್ಯೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೈ ಎಂ.ಬಿ , ಕೆ.ಪಿ.ಸಿ.ಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ತಾಲೂಕು ಕಾಂಗ್ರೆಸ್ ವಕ್ತಾರ ಅಮಲ ರಾಮಚಂದ್ರ, ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಎ.ಕೆ ಜಯರಾಮ ರೈ ಮತ್ತು ಬಟ್ಯಪ್ಪ ರೈ ದೇರ್ಲ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ,ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರು ಗೌರವಾರ್ಪಣೆ ಸಲ್ಲಿಸಿದರು.


ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ , ಸದಸ್ಯರಾದ ದಿವ್ಯನಾಥ ಶೆಟ್ಟಿ ಕಾವು, ನಾರಾಯಣ ನಾಯ್ಕ ಚಾಕೋಟೆ , ಜಯಂತಿ ಪಟ್ಟುಮೂಲೆ, ಭಾರತಿ ವಸಂತ್ ಕೌಡಿಚ್ಚಾರು,ಮತ್ತು ಮೋನಪ್ಪ ಪೂಜಾರಿ ಕೆರೆಮಾರು, ಮಾಜಿ ಸದಸ್ಯೆ ಶಶಿಕಲಾ ಚೌಟ ಕಾವು, ರವೀಂದ್ರ ಪೂಜಾರಿ ಮಂಜಕೊಟ್ಯ ಮತ್ತು ವಸಂತ ಕುಮಾರ್ ಕೌಡಿಚ್ಚಾರು,ಸಂತೋಷ್ ರೈ ಇಳಂತಾಜೆ , ಪುತ್ತೂರು ನಗರ ಸಭೆ ಸದಸ್ಯ ರಮೇಶ್ ರೈ ಪುತ್ತೂರು ,ಪ್ರದೀಪ್ ಕುಮಾರ್ ಪಾಂಬಾರು, ವಕೀಲ ವೆಂಕಪ್ಪ ಗೌಡ ಸುಳ್ಯ, ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್,ಎ.ಪಿ.ಎಂ.ಸಿ ಪುತ್ತೂರು ಇದರ ಮಾಜಿ ಅಧ್ಯಕ್ಷ ಅಮ್ಮಣ್ಣ ರೈ ಡಿ, ಪಾಪೆಮಜಲು, ರಾಜೀವ ರೈ ಕುತ್ಯಾಡಿ, ಇಸ್ಮಾಯಿಲ್ ಹಾಜಿ ಕೌಡಿಚ್ಚಾರು, ಅರಣ್ಯ ಇಲಾಖೆಯ ಎಂ.ಡಿ ಪ್ರವೀಣ್ ಶೆಟ್ಟಿ , ಮತ್ತು ರೆಂಜರ್ ಅರುಣ್, ರಾಜೀವಿ ರೈ ಬೆಳ್ಳಾರೆ,ಗೂನಡ್ಕ ಇಬ್ರಾಹಿಂ,ನಝಿರ್ ಮಠ, ಪಂಚಾಯತ್ ಮಾಜಿ ಅಧ್ಯಕ್ಷ ಶಿವರಾಮ ಮಣಿಯಾಣಿ, ಮಾಜಿ ಸದಸ್ಯ ಬಶೀರ್ ಕೌಡಿಚ್ಚಾರು ಸಂತೋಷ್ ಕುಲಾಲ್ ಕೌಡಿಚ್ಚಾರು, ರಫೀಕ್ ಶೇಖಮಲೆ ,ಕೆ.ಎಫ್.ಡಿ.ಸಿ ಡಿವಿಜನ್ ಮ್ಯಾನೇಜರ್ ರಂಗನಾಥ್, ಯೂನಿಯನ್ ನಾಯಕರುಗಳಾದ ಚಂದ್ರ ಲಿಂಗಂ ಸುಳ್ಯ,ಆನಂದ್ ಐವರ್ನಾಡು, ಕಾರ್ಮಿಕ ಮುಖಂಡ ಷಣ್ಮುಖ ಸುಳ್ಯ,ಪೆರುಮಾಳ್ ಸುಳ್ಯ, ಸೆಬಾಸ್ಟಿನ್ ಕಲ್ಲುಗುಂಡಿ, ಮುಂತಾದ ಸಾವಿರಾರು ಗಣ್ಯರು ಉಪಸ್ಥಿತರಿದ್ದರು.


ಅಂತ್ಯಕ್ರಿಯೆ
ಮೃತರ ಪಾರ್ಥಿವ ಶರೀರವನ್ನು ಪುತ್ತೂರಿನ ರುದ್ರ ಭೂಮಿಗೆ ತಂದಾಗ ,ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ರೈ ಕೋಡಿಂಬಾಡಿ, ಕಾಂಗ್ರೆಸ್ ಮುಖಂಡ ಪಂಜಿ ಗುಡ್ಡೆ ಈಶ್ವರ ಭಟ್, ಶಾಸಕರ ಪಿ.ಎ ಪ್ರದೀಪ್ ಕುಮಾರ್ ,ಇಸಾಕ್ ಸಾಲ್ಮರ, ಮುಂತಾದವರು ಅಂತಿಮ ದರ್ಶನ ಪಡೆದರು.
ಮುಂಬೈಯಲ್ಲಿರುವ ಮಾಜಿ ಸಚಿವ ರಾಮನಾಥ ರೈ ಬೆಳ್ಳಿಪ್ಪಾಡಿ ದೂರವಾಣಿ ಮುಖೇನ ಸಂತಾಪ ವ್ಯಕ್ತಪಡಿಸಿದ್ದಾರೆ.ಸಾರ್ವಜನಿಕರ ಅಂತಿಮ ದರ್ಶನದ ಬಳಿಕ
ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

LEAVE A REPLY

Please enter your comment!
Please enter your name here