ಪುತ್ತೂರು: ಹೋಮೀಯೊಪತಿ ಪದ್ಧತಿಯ ಜನಕ ಜರ್ಮನ್ ಮೂಲದ ಸಾಮುಯಲ್ ಹಾನಿಮನ್ ಜನ್ಮದಿನಾಚರಣೆ ಅಂಗವಾಗಿ ವಿಶ್ವ ಹೋಮೀಯೊಪತಿ ದಿನಾಚರಣೆ ಹಾಗೂ ಹೋಮೀಯೊಪತಿ ವೈದ್ಯರ ವಿಚಾರ ಸಂಕಿರಣವನ್ನು ಭಾರತೀಯ ಹೋಮೀಯೊಪತಿ ವೈದ್ಯರ ಸಂಘ(IHMA) ಕರ್ನಾಟಕ ಮತ್ತು ಮಂಗಳೂರು ಘಟಕದ ಆಶ್ರಯದಲ್ಲಿ ಮೇ.12 ರಂದು ನಗರದ ಜಿ ಎಚ್ ಎಸ್ ರೋಡ್ ಹಂಪನಕಟ್ಟೆ ನಲ್ಲಿರುವ Hotel Saffron ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಐಎಚ್ಎಂಎ ರಾಜ್ಯಾಧ್ಯಕ್ಷ ಡಾ. ಪ್ರವೀಣ್ ರಾಜ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ತಮಿಳುನಾಡಿನ ಖ್ಯಾತ ಹೋಮೀಯೊಪತಿ ತಜ್ಞ ವೈದ್ಯ ಹಾಗೂ ವೈದ್ಯರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಡಾ. ಧೀರಜ್ ಸಾಮುಯಲ್ ಸಂಪನ್ಮೂಲ ವ್ಯಕ್ತಿಯಾಗಿ ವೈದ್ಯರನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಡಾ. ಶ್ರೇಯಾಂಕ್, ಡಾ. ವಿಘ್ನೇಶ್ ಮತ್ತು ಡಾ. ನಂದಗೋಪಾಲ್ ಈ ಸಂದರ್ಭದಲ್ಲಿ ಸಾಮುಯಲ್ ಹಾನಿಮನ್ ಜೀವನ ಹಾಗೂ ಪ್ರಸಕ್ತ ಹೋಮೀಯೊಪತಿ ಅವಿಷ್ಕಾರಗಳು, ಸಂಶೋಧನೆ ಮುಂತಾದ ವಿಷಯದಲ್ಲಿ ತಮ್ಮ ವಿಚಾರಧಾರೆಯನ್ನು ಹಂಚಿಕೊಂಡರು.
ಹೋಮೀಯೊಪತಿ ಕ್ಷೇತ್ರದಲ್ಲಿ ಮಾಡಿದ ಅಪೂರ್ವ ಸಾಧನೆಗೆ ಮಂಗಳೂರು ಫಾದರ್ ಮುಲ್ಲರ್ ಹೋಮೀಯೊಪತಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಹೋಮೀಯೊಪತಿ ವೈದ್ಯ ಡಾ. ಶ್ರೀನಾಥ್ ರಾವ್ ಅವರನ್ನು ವೈದ್ಯರ ಸಂಘದ ಪರವಾಗಿ ಸನ್ಮಾನಿಸಲಾಯಿತು.
ದಕ್ಷಿಣಕನ್ನಡ-ಉಡುಪಿ-ಮಡಿಕೇರಿ ಜಿಲ್ಲೆಯ ಹೋಮೀಯೊಪತಿ ವೈದ್ಯರು ಗಳಾದ ಡಾ. ಪ್ರಭು ಕಿರಣ್, ಡಾ. ಪ್ರಸನ್ನ ಕುಮಾರ್, ಡಾ, ಉತ್ತಮ ಕುಮಾರ್ ಶೆಟ್ಟಿ, ಡಾ. ಗಿರೀಶ್ ನಾವಡ, ಡಾ ಗುರು ಪ್ರಸಾದ್,ಹಿರಿಯ ವೈದ್ಯರಾದ ಡಾ. ಅಬ್ರಹಾಂ ಜಾಕರೀಯ, ಡಾ.ಸುಪ್ರಸಾದ್ ರಾವ್, ಡಾ ಆನಂತ್, ಡಾ.ಗ್ರೇಟ ಲೋಬೊ ಮುಂತಾದವರು ಪಾಲ್ಗೊಂಡಿದ್ದರು. ಐಎಚ್ಎಂಎ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಹೋಮೀಯೊಪತಿ ಮಂಡಳಿಯ ನಿರ್ದೇಶಕ ಡಾ. ಪ್ರವೀಣ್ ಕುಮಾರ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಐಎಚ್ಎಂಎ ಮಂಗಳೂರಿನ ಅಧ್ಯಕ್ಷ ಡಾ. ಅವಿನಾಶ್ ವಿ.ಎಸ್ ವಂದಿಸಿದರು.