ಪುತ್ತೂರು: ಚುನಾವಣಾ ಸಮಯದಲ್ಲಿ ಕೃಷಿ ರಕ್ಷಣೆಯ ಕೋವಿಯನ್ನು ಕಾನೂನು ಬಾಹಿರವಾಗಿ ಠೇವಣಿ ಇರಿಸುತ್ತಿದ್ದ ವಿಚಾರವನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿ ರಿಟ್ ದಾವೆ ಸಲ್ಲಿಸಿದ್ದನ್ನು ಪುರಸ್ಕರಿಸಿ ಏ.25ರಂದು ಐತಿಹಾಸಿಕ ಆದೇಶ ಹೊರಡಿಸಿದ್ದನ್ನು ಸ್ವಾಗತಿಸುತ್ತಿದ್ದೇವೆ. ರೈತರಿಗೆ ಯಾವತ್ತೂ ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ನ್ಯಾಯಮೂರ್ತಿಗಳು ಮುತುವರ್ಜಿಯಿಂದ ಪ್ರತಿಯೊಂದು ವಿಚಾರವನ್ನು ತಿಳಿದು ಶಾಶ್ವತವಾಗಿ ಕೋವಿ ಠೇವಣಾತಿಯಿಂದ ರಿಯಾಯಿತಿ ನೀಡುವ ಕೆಲಸ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಹೇಳಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಆದೇಶದಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿ ಮೇ.14ರಂದು ಅಂತಿಮ ಆದೇಶವನ್ನು ಆನ್ ಲೈನ್ ಗೆ ಹಾಕಿದ್ದಾರೆ ಎಂದ ಅವರು ಇನ್ನು ಮುಂದೆಯಾದರೂ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಅರಿತುಕೊಂಡು ಕೃಷಿಕರಿಗೆ ಕಿರುಕುಳ ನೀಡುವುದನ್ನು ತಿದ್ದಿಕೊಂಡಾರು ಎಂಬುದನ್ನು ನಂಬಿದ್ದೇವೆ. ಕೇಂದ್ರ ಚುನಾವಣಾ ಆಯೋಗವನ್ನೂ ಪಾರ್ಟಿ ಮಾಡಿರುವ ಕಾರಣ ಈ ಆದೇಶ ಭಾರತದ ಎಲ್ಲಾ ಪ್ರದೇಶಗಳಿಗೂ ಅನ್ವಯವಾಗುತ್ತದೆ. ಕೋವಿ ಠೇವಣಿ ಇಟ್ಟು 5 ದಿನಕ್ಕೆ ಕೃಷಿಕನ ಮೇಲೆ ಹಂದಿ ದಾಳಿ ಮಾಡಿದ್ದು, ಅಧಿಕಾರಿಗಳು ಈ ಬಗ್ಗೆ ಇನ್ನೂ ಕ್ರಮಕೈಗೊಂಡಿಲ್ಲ ಎಂದವರು ಹೇಳಿದರು. ಕೃಷಿಕ ಮಾಣಿಮೂಲೆ ಗೋವಿಂದ ಭಟ್, ರೈತ ಸಂಘ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ, ಮನೋಜ್ ಶಿರಾಡಿ ಉಪಸ್ಥಿತರಿದ್ದರು.