ಪುತ್ತೂರು:ಇಲ್ಲಿನ ಉರ್ಲಾಂಡಿ ನಾಯರಡ್ಕ ಮಾಂಕು ಎಂಬವರು ಮನೆಯ ಹಿಂದುಗಡೆ ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ.ಈ ಕುರಿತು ಅವರ ಪತ್ನಿ ಶ್ರೀಮತಿ ಲಕ್ಷ್ಮೀ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಂಡ ಮಾಂಕುರವರು ಈ ಹಿಂದೆ ಮೇಸ್ತ್ರಿ ಕೆಲಸವನ್ನು ಮಾಡುತ್ತಿದ್ದರು. ಅವರಿಗೆ 1 ವರ್ಷದ ಹಿಂದೆ ಸ್ಟೋಕ್ ಹೊಡೆದಿದ್ದು, ಈಗ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದರು ಅಲ್ಲದೇ ಬಿಪಿ ಕಾಯಿಲೆಗೂ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು.ಮೇ14 ಮನೆಯಲ್ಲಿಯೇ ಇದ್ದ ಅವರು ಬೆಳಿಗ್ಗೆಯಿಂದ ಏನೂ ತಿನ್ನದೇ, ಇದ್ದು ಮಂಕಾಗಿ ಕುಳಿತುಕೊಂಡಿದ್ದರು. ಏನು ಎಂದು ಕೇಳಿದರೂ ಹೇಳುತ್ತಿರಲಿಲ್ಲ. ರಾತ್ರಿ ದೊಡ್ಡ ಸೊಸೆ ಜಯಂತಿ ಚಹಾ ಮಾಡಿಕೊಟ್ಟಿದ್ದು, ಅದನ್ನೂ ಕುಡಿದಿರುವುದಿಲ್ಲ. ರಾತ್ರಿ ತಾನು ಸ್ನಾನವನ್ನು ಮುಗಿಸಿಕೊಂಡು ಬಂದಾಗ ಗಂಡ ನಾಪತ್ತೆಯಾಗಿದ್ದರು.ಕಿರಿ ಸೊಸೆ ಅಮಿತಾರವರು ಮನೆಯ ಹಿಂದುಗಡೆ ಟಾರ್ಚ್ ಹಾಕಿ ಹುಡುಕುತ್ತಿರುವಾಗ ಗಂಡ ಮನೆಯ ಹಿಂದುಗಡೆ ಇದ್ದ ಹಲಸಿನ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು ಕಂಡು ಬಂದು ಕೂಡಲೇ ಚಿಕಿತ್ಸೆ ಬಗ್ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅವರು ಆ ವೇಳೆಗಾಗಲೇ ಮೃತಪಟ್ಟಿದ್ದರು ಎಂದು ಲಕ್ಷ್ಮೀಯವರು ದೂರಿನಲ್ಲಿ ಲಕ್ಷ್ಮೀ ತಿಳಿಸಿದ್ದಾರೆ.