ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುತ್ತಿದ್ದ ಹೋರಿಗಳೆರಡು ನಾಪತ್ತೆಯಾದ ಕುರಿತು ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ ಬಳಿಕ ಇದೀಗ ಹೋರಿಗಳ ಪತ್ತೆಗಾಗಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿಯ ಮೊರೆ ಹೋಗಿದ್ದಾರೆ.
ಮಹಾಲಿಂಗೇಶ್ವರ ದೇವಸ್ಥಾನದ ಪರಿಸರ ಸಹಿತ ಪೇಟೆಯಲ್ಲಿ ಸುತ್ತಾಡುತ್ತಿದ್ದ ಕಪ್ಪು ಬಿಳಿ ಮತ್ತು ಕಪ್ಪು ಬಣ್ಣದ ಎರಡು ಹೊರಿಗಳು ಮೇ.1 ರಿಂದ ನಾಪತ್ತೆಯಾಗಿತ್ತು. ಇದು ಗೋ ಕಳ್ಳತನ ಮಾಡಿದವರ ಕೃತ್ಯವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ವಿಶ್ವಹಿಂದು ಪರಿಷತ್ ಬಜರಂಗದಳದಿಂದ ಮೇ.16ರಂದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಸಂಘಟನೆಯ ಕಾರ್ಯಕರ್ತರು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವದ ಮೊರೆ ಹೋಗಿದ್ದಾರೆ. ಮೇ.17ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಭಂಡಾರದ ಮನೆಯಲ್ಲಿ ಹೋರಿಗಳ ಪತ್ತೆಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ದೈವಸ್ಥಾನ ಅರ್ಚಕ ರವಿ ನೆಲ್ಲಿತ್ತಾಯ ಅವರು ಪ್ರಾರ್ಥನೆ ಮಾಡಿದರು.