ಕಿಶೋರ್ ಬೊಟ್ಯಾಡಿ ಬಳಗದ Ella ಬಾಲಿವುಡ್ ಚಿತ್ರ ಬಿಡುಗಡೆ

0

ಪುತ್ತೂರು: ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ಮಂಗಳೂರಿನವರೇ ನಿರ್ಮಿಸಿ, ನಿರ್ದೇಶಿಸಿರುವ ಬಾಲಿವುಡ್ ಚಲನಚಿತ್ರ “Ella” ಮೇ 17ರಂದು MX playerನಲ್ಲಿ ಬಿಡುಗಡೆಯಾಗಿದೆ.


8 ವರ್ಷದ ಮಗು ತನ್ನ ಗೆಳೆಯ ಆಮೆಯನ್ನು ಸಮಾಜದ ಕಟುಕರಿಂದ ರಕ್ಷಿಸುವ ಪ್ರಯತ್ನ ಹಾಗೂ ಅವಳ ಮುಗ್ದ ಹೋರಾಟ ಈ ಚಿತ್ರದ ಶೀರ್ಷಿಕೆಯಾಗಿದೆ. ಖ್ಯಾತ ಬಾಲಿವುಡ್ ನಟ ಮಕರಂದ ದೇಶಪಾಂಡೆ, ಇಶಾ ತಲ್ವಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾಂತಾರ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪರಶು ಲ್ಯಾಂಡ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಪ್ರತೀಕ್ ಶೆಟ್ಟಿ, ಕಿಶೋರ್ ಕುಮಾರ್ ಪುತ್ತೂರು, ವೋಲ್ಸಿ ತಾವ್ರೋ ಮತ್ತು ಉದಯ್ ಶೆಟ್ಟಿ ಈ ಚಿತ್ರ ನಿರ್ಮಿಸಿದ್ದು ರೋಷನ್ ಫೆರ್ನಾಂಡಿಸ್ ರಚಿಸಿ ನಿರ್ದೇಶಿಸಿದ್ದಾರೆ. ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಈ ಚಿತ್ರದಲ್ಲಿ ಉಗ್ರರನ್ನು ಸದೆ ಬಡಿಯುವ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here