ಫಿಲೋಮಿನಾದಲ್ಲಿ ವಿಜ್ರಂಭಿಸಿದ ‘ಎಸ್‌ಪಿಎಲ್ ಸೀಸನ್-4’ ಲೀಗ್ ಕ್ರಿಕೆಟ್

0

ಅಗ್ನಿ ಬ್ರದರ‍್ಸ್ ತಂಡ ಚಾಂಪಿಯನ್, ಟೀಮ್ ಮೆವರಿಕ್ಸ್ ರನ್ನರ್ಸ್

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಪಟುಗಳಿಗಾಗಿ ‘ಫಿಲೋಮಿನಾ ಪ್ರೀಮಿಯರ್ ಲೀಗ್(ಎಸ್‌ಪಿಎಲ್) ಸೀಸನ್-4’ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಕಾರ್ಯಕ್ರಮವು ಕಾಲೇಜಿನ ಕ್ರೀಡಾಂಗಣದಲ್ಲಿ ಮೇ 18 ರಂದು ಜರಗಿತು.


ಪಂದ್ಯಾಕೂಟದಲ್ಲಿ ಅಗ್ನಿ ಬ್ರದರ‍್ಸ್ ತಂಡವು ಸೀಸನ್-4 ಚಾಂಪಿಯನ್ ಆಗಿದ್ದು ಟೀಮ್ ಮೆವರಿಕ್ಸ್ ತಂಡವು ರನ್ನರ್ಸ್ ಪ್ರಶಸ್ತಿ ಪಡೆಯಿತು. ಅಗ್ನಿ ಬ್ರದರ‍್ಸ್ ತಂಡವು ಸೀಸನ್-3 ಚಾಂಪಿಯನ್ ಆಗಿಯೂ ಹೊರಹೊಮ್ಮಿತ್ತು. ಮೂರನೇ ಸ್ಥಾನಿಯಾಗಿ ಟೀಮ್ ಆಗಸ್ತ್ಯ ಚತುರ್ಥ ಸ್ಥಾನಿಯಾಗಿ ಟೀಮ್ ಕ್ಷೇವಿಯನ್ಸ್ ತಂಡಗಳು ಗುರುತಿಸಿಕೊಂಡಿತು. ಚಾಂಪಿಯನ್ ತಂಡಕ್ಕೆ ರೂ.14 ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ.10 ಸಾವಿರ ನಗದು ಹಾಗೂ ಟ್ರೋಫಿ ಮತ್ತು ತೃತೀಯ ಸ್ಥಾನಿ ಹಾಗೂ ಚತುರ್ಥ ಸ್ಥಾನಿ ತಂಡಗಳಿಗೆ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಯಿತು. ಇನ್ನುಳಿದ ನಾಲ್ಕು ತಂಡಗಳಾದ ಎಕ್ಸ್ ಕ್ಲಸರ್ಸ್, ಸಹಾಯಕ ಪ್ರಾಧ್ಯಾಪಕರ ತಂಡ, ಟೀಮ್ ಸ್ಕ್ವಾಡ್ರನ್, ಟೀಮ್ ಟಿ.ಎಕ್ಸ್.ಎಂ, ಬಿಎಸ್ಸಿ ಮೊಂಕ್ ಯುನೈಟೆಡ್, ಫಿಲೋ ಹಾಕ್ಸ್ ತಂಡಗಳು ಲೀಗ್ ಹಂತದಲ್ಲಿಯೇ ಹೊರ ಬಿದ್ದಿತ್ತು.


ಕ್ವಾಲಿಫೈಯರ್,ಎಲಿಮಿನೇಟರ್ ಪಂದ್ಯ:
ಐಪಿಎಲ್ ನಿಯಮಾವಳಿಯಂತೆ ಪಂದ್ಯಾಟವು ಸಾಗಿದ್ದು ಒಟ್ಟು ಹತ್ತು ತಂಡಗಳನ್ನು ಎರಡು ವಿಭಾಗಳನ್ನಾಗಿ ವಿಂಗಡಿಸಲಾಗಿತ್ತು. ಲೀಗ್ ಮಾದರಿಯಲ್ಲಿ ನಡೆದ ಈ ಪಂದ್ಯಾಟದಲ್ಲಿ ಅಂತಿಮವಾಗಿ ಅಗ್ನಿ ಬ್ರದರ‍್ಸ್ ತಂಡವು ಟೇಬಲ್ ಟಾಪ್ ತಂಡವಾಗಿ ಗುರುತಿಸಿಕೊಂಡರೆ, ದ್ವಿತೀಯ ಸ್ಥಾನಿಯಾಗಿ ಟೀಮ್ ಆಗಸ್ತ್ಯ, ತೃತೀಯ ಸ್ಥಾನಿಯಾಗಿ ಟೀಮ್ ಮೆವರಿಕ್ಸ್, ಚತುರ್ಥ ಸ್ಥಾನಿಯಾಗಿ ಟೀಮ್ ಕ್ಸೇವಿಯನ್ ನಂತರದ ಸ್ಥಾನ ಪಡೆದಿತ್ತು. ಮೊದಲು ನಡೆದ ಕ್ವಾಲಿಫೈಯರ್ ಪಂದ್ಯಾಟದಲ್ಲಿ ಅಗ್ನಿ ಬ್ರದರ್ಸ್ ತಂಡವು ಟೀಮ್ ಆಗಸ್ತ್ಯ ತಂಡವನ್ನು ಸೋಲಿಸಿ ನೇರವಾಗಿ ಫೈನಲಿಗೆ ನೆಗೆದಿತ್ತು. ಎಲಿಮಿನೇಟರ್ ಪಂದ್ಯಾಟದಲ್ಲಿ ಟೀಮ್ ಮೆವರಿಕ್ಸ್ ಹಾಗೂ ಟೀಮ್ ಕ್ಷೇವಿಯನ್ ತಂಡದ ನಡುವೆ ನಡೆದಿದ್ದು ಇದರಲ್ಲಿ ಟೀಮ್ ಕ್ಷೇವಿಯನ್ ತಂಡವು ಸೋಲೊಪ್ಪಿ ಟೂರ್ನಿಯಿಂದ ನಿರ್ಗಮಿಸಿತು. ದ್ವಿತೀಯ ಕ್ವಾಲಿಫೈಯರ್ ಟೀಮ್ ಆಗಸ್ತ್ಯ ಹಾಗೂ ಟೀಮ್ ಮೆವರಿಕ್ಸ್ ತಂಡದ ನಡುವೆ ನಡೆದಿದ್ದು ಇದರಲ್ಲಿ ಟೀಮ್ ಆಗಸ್ತ್ಯ ತಂಡ ಸೋಲು ಅನುಭವಿಸಿ ನಿರ್ಗಮಿಸಿದ್ದು, ಟೀಮ್ ಮೇವರಿಕ್ಸ್ ತಂಡವು ಫೈನಲಿಗೆ ಅರ್ಹತೆ ಪಡೆಯಿತು.


ಬಹುಮಾನ ವಿತರಣೆ:
ಸಂಜೆ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಸುಳ್ಯದಲ್ಲಿ ಎಸಿಎಫ್ ಆಗಿರುವ ಪ್ರವೀಣ್ ಶೆಟ್ಟಿ, ಕಾಲೇಜಿನ ಉಪ ಪ್ರಾಂಶುಪಾಲ ಡಾ|ವಿಜಯಕುಮಾರ್ ಮೊಳೆಯಾರ್‌ರವರು ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಪಿನ್ ಎಚ್.ಜಿ, ಕಾರ್ಯದರ್ಶಿ ಸಮೃರ್ದಧಿ ಶೆಣೈ, ಜೊತೆ ಕಾರ್ಯದರ್ಶಿ ರಕ್ಷಾ ಪಿ.ಬಿರವರು ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೋ ವಿಜೇತರ ಪಟ್ಟಿ ವಾಚಿಸಿದರು. ಅಂಪೈರ‍್ಸ್‌ಗಳಾಗಿ ಯಶ್, ಧನುಷ್, ರಕ್ಷಿತ್, ಸಂತೋಷ್, ವೀಕ್ಷಕ ವಿವರಣೆಗಾರರಾಗಿ ಸಾತ್ವಿಕ್, ರಾಹುಲ್, ಸ್ಕೋರರ್ ಆಗಿ ಯಶ್ವಿನ್, ರಂಜಿತ್, ಆದರ್ಶ್, ಆಕಾಶ್‌ರವರು ಸಹಕರಿಸಿದರು. ಉಪನ್ಯಾಸಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ದೀಕ್ಷಿತ್ ಕೆ, ರಾಹುಲ್ ಸಹಕರಿಸಿದರು.

ಜಿದ್ದಾಜಿದ್ದಿನ ಫೈನಲ್..
ಸಂಜೆ ಅಗ್ನಿ ಬ್ರದರ‍್ಸ್ ತಂಡ ಹಾಗೂ ಟೀಮ್ ಮೆವರಿಕ್ಸ್ ತಂಡಗಳ ನಡುವೆ ನಡೆದ ಪ್ರಶಸ್ತಿ ಸುತ್ತಿನ ಫೈನಲ್ ಹೋರಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಮೆವರಿಕ್ಸ್ ತಂಡವು ತಂಡದ ಆರಂಭಿಕ ಆಟಗಾರ ಅಶ್ರಫ್‌ರವರ ಮೂರು ಸಿಕ್ಸರ್‌ಗಳ ನೆರವಿನಿಂದ ಮೂರು ಓವರ್‌ಗಳಲ್ಲಿ 44 ರನ್‌ಗಳನ್ನು ಪೇರಿಸಿತ್ತು. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಅಗ್ನಿ ಬ್ರದರ‍್ಸ್ ತಂಡದ ಆರಂಭಿಕ ಬ್ಯಾಟರ್ ಅಭಿಕೃಷ್ಣರವರ ಹೊಡಿಬಡಿಯ 32 ರನ್(46, 24) ಆಟದಿಂದಾಗಿ ವಿಜಯಿ ರನ್‌ಗಳನ್ನು ಬಾರಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

LEAVE A REPLY

Please enter your comment!
Please enter your name here