ಪುತ್ತೂರು: ರೈತರ ಜಮೀನಿನ ಪಹಣಿ ಪತ್ರಕ್ಕೆ(ಆರ್‌ಟಿಸಿ) ಆಧಾರ್ ಕಾರ್ಡ್ ಜೋಡಣೆಯನ್ನು ಸರಕಾರ ಕಡ್ಡಾಯಗೊಳಿಸಿದೆ.
ಸರಕಾರದ ಮಹತ್ವಪೂರ್ಣ ಯೋಜನೆಗಳಲ್ಲಿ ಪಹಣಿಗೆ ಆಧಾರ ಸಂಖ್ಯೆ ಜೋಡಣೆ ಮಾಡುವುದು ಕೂಡ ಒಂದಾಗಿದ್ದು ಜಮೀನಿಗೆ ಸಂಬಂಧಿಸಿದಂತೆ ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಜೋಡಣೆ ಅವಶ್ಯಕವಾಗಿದೆ. ಆದುದರಿಂದ ಪಹಣಿ ಹೊಂದಿರುವ ಎಲ್ಲಾ ರೈತರು ತಮ್ಮ ಪಹಣಿಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸಬೇಕು. ತಪ್ಪಿದಲ್ಲಿ ಮುಂದೆ ಸರಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ.
ಮೊಬೈಲ್‌ನಲ್ಲೇ ಜೋಡಣೆ ಸಾಧ್ಯ:
ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಮೊಬೈಲ್‌ನಲ್ಲೇ ಸಾಧ್ಯ. ಪಹಣಿ ಹೊಂದಿರುವ ರೈತರು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ https://landrecords.karnataka.gov.in/ ಮೂಲಕ ಆಧಾರ್ ಜೋಡಣೆ ಮಾಡಬಹುದು.