34 ನೆಕ್ಕಿಲಾಡಿ: ಶ್ರೀ ಗುರು ರಾಘವೇಂದ್ರ ಮಠದಲ್ಲಿ ದೃಢಕಲಶಾಭಿಷೇಕ

0

ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಲಕ್ಷ್ಮಣ ಸಹಿತ ಸೀತಾರಾಮ ದೇವರು, ಮುಖ್ಯಪ್ರಾಣ ದೇವರು, ಶ್ರೀ ಗುರು ರಾಘವೇಂದ್ರ ಸಾರ್ವಭೌಮರ ಬೃಂದಾವನದ ದೃಢಕಲಶಾಭಿಷೇಕವನ್ನು ಮೇ.21ರಂದು ಫಲಿಮಾರು ಮಠದ ಶ್ರೀ 108 ವಿದ್ಯಾಧೀಶತೀರ್ಥ ಶ್ರೀ ಪಾದಂಗಳರವರು ನೆರವೇರಿಸಿದರು.

ಪೂರ್ವಾಹ್ನ 8ರಿಂದ 9ರವರೆಗಿನ ಶುಭ ವೃಷಭ ಲಗ್ನದ ಶುಭಮುಹೂರ್ತದಲ್ಲಿ ದೃಢಕಲಶಾಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ಭಜನಾ ಸೇವೆ, ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಪ್ರಸಾದ ವಿತರಿಸಲಾಯಿತು.


ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾಕ್, ಕೆ. ಹರೀಶ ಉಪಾಧ್ಯಾಯ, ಬಿ. ಧನ್ಯಕುಮಾರ್ ರೈ, ಶ್ರೀ ರಾಘವೇಂದ್ರ ಮಠದ ಅಧ್ಯಕ್ಷ, ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿ ಕೋಶಾಧಿಕಾರಿ ಕೆ. ಉದಯ ಕುಮಾರ್, ಬ್ರಹ್ಮಕಲಶಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ, ಉಪಾಧ್ಯಕ್ಷರುಗಳಾದ ಕೆ. ಸದಾನಂದ, ಕಾರ್ಯದರ್ಶಿಗಳಾದ ಪ್ರಶಾಂತ್ ನೆಕ್ಕಿಲಾಡಿ, ಶ್ರೀನಿಧಿ ಉಪಾಧ್ಯಾಯ, ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಭಟ್, ೩೪ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್, ಉಪಾಧ್ಯಕ್ಷ ಹರೀಶ್ ನಾಯಕ್ ದರ್ಬೆ, ಸದಸ್ಯೆ ಗೀತಾ ವಾಸು ಗೌಡ, ಪ್ರಮುಖರಾದ ವಿನೀತ್ ಶಗ್ರಿತ್ತಾಯ, ಸ್ವರ್ಣೇಶ್ ಗಾಣಿಗ, ಗೌತಮ್, ಜಯಪ್ರಕಾಶ್ ಶೆಟ್ಟಿ, ಬಾಲಕೃಷ್ಣ ನೆಕ್ಕಿಲಾಡಿ, ವಿದ್ಯಾಧರ ಜೈನ್, ಬಿಪಿನ್, ರವಿ ಭಟ್ ಅಮ್ಟಂಗೆ, ಶಂಕರನಾರಾಯಣ ಭಟ್, ಹರೀಶ್ ಬಂಡಾರಿ, ಜಗದೀಶ್ ಶೆಟ್ಟಿ, ನಿತೀಶ್, ಶರತ್ ಕೋಟೆ, ಸುದರ್ಶನ್, ಕೀರ್ತನ್ ಶೆಟ್ಟಿ, ದೀಪಕ್, ಸುಶೀಲಾ ಆಚಾರ್ಯ, ವಸುಧಾ ಹರೀಶ್ ಉಪಾಧ್ಯಾಯ, ಪ್ರಜ್ಞಾ, ವಿಮಲಕೃಷ್ಣ, ಹೇಮಾವತಿ, ರಾಜೇಶ್ ನಾಯಕ್, ವಿನಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here