ಕೊಂಬಾರು: ಚರಂಡಿಗೆ ಬಿದ್ದ ಕಾರು-ಅಕ್ರಮ ದನ ಸಾಗಾಟ ಶಂಕೆ- ತನಿಖೆ ನಡೆಸಲು ಹಿಂದೂ ಸಂಘಟನೆಗಳ ಆಗ್ರಹ

0

ಕಡಬ: ಕೊಂಬಾರು ರಬ್ಬರ್ ಬೋರ್ಡ್ ಸಮೀಪ ಆಲ್ಟೋ ಕಾರೊಂದು ಚರಂಡಿಗೆ ಬಿದ್ದ ಘಟನೆ ಮೇ.21ರಂದು ರಾತ್ರಿ ನಡೆದಿದೆ. ಈ ಕಾರಿನೊಳಗಡೆ ಹಸಿ ಸಗಣಿ ಇದ್ದು ಅಕ್ರಮ ದನ ಸಾಗಾಟದ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕೊಂಬಾರು ಕಡೆಯಿಂದ ಬಂದ ಆಲ್ಟೋ ಕಾರು ಸುಂಕದಕಟ್ಟೆ ಕಡೆಗೆ ಸಂಚರಿಸುತ್ತಿದ್ದು, ಕಾರು ಚರಂಡಿಗೆ ಬಿದ್ದ ಬಳಿಕ ಅದರ ಚಾಲಕ ಪತ್ತೆಯಾಗಿಲ್ಲ, ಕಾರನ್ನು ಕಡಬ ಪೋಲಿಸರು ಠಾಣೆಯಲ್ಲಿ ಇರಿಸಿದ್ದಾರೆ.

ಅಕ್ರಮ ದನ ಸಾಗಾಟ- ದೂರು
ಕಾರಿನಲ್ಲಿ ಅಕ್ರಮ ದನ ಸಾಗಾಟ ಮಾಡಲಾಗಿದ್ದು, ದನವೊಂದು ಸಮೀಪದಲ್ಲಿ ಪತ್ತೆಯಾಗಿದೆ. ಅಲ್ಲದೆ ಕಾರಿನಲ್ಲಿ ಹಸಿ ಸೆಗಣಿ ಕೂಡ ಇದೆ. ಪೋಲಿಸರು ತನಿಖೆ ನಡೆಸಿ ಅಕ್ರಮ ದನ ಸಾಗಾಟ ಮಾಡಿದವರನ್ನು ಪತ್ತೆ ಹಚ್ಚಬೇಕು, ಈ ಬಗ್ಗೆ ಸಂಘಟನೆಯ ಕಡೆಯಿಂದ ದೂರು ನೀಡಲಾಗುವುದು ಎಂದು ಹಿಂದೂ ಸಂಘಟನೆಯ ಮುಖಂಡ ಪ್ರಮೋದ್ ರೈ ನಂದುಗುರಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here