ಪ್ಲಾಸ್ಟಿಕ್ ಬಳಕೆ – ವಿವಿಧ ಅಂಗಡಿಗಳಿಗೆ ನಗರಸಭೆಯಿಂದ ದಾಳಿ

0

ಪುತ್ತೂರು: ಪ್ಲಾಸ್ಟಿಕ್ ಬಳಕೆ ಪರಿಶೀಲನೆ ಕುರಿತು ವಿವಿಧ ವಾಣಿಜ್ಯ ಮಳಿಗೆಗಳಿಗೆ ನಗರಸಭೆ ಇಂದು ದಾಳಿ ಮಾಡಿದೆ. ಎ ಸಿ ಸೂಚನೆ ಮೇರೆಗೆ ಈ ದಾಳಿ ನಡೆದಿದೆ.

ಕೋರ್ಟ್ ರೋಡ್, ಮುಖ್ಯ ರಸ್ತೆ ಹಾಗೂ ದರ್ಬೆಯ ಕೆಲವು ಅಂಗಡಿ ಮಳಿಗೆಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಅಂಗಡಿ ಮಳಿಗೆಗಳಿಂದ ಸುಮಾರು 40 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್ ರೈ, ಕಂದಾಯ ಅಧಿಕಾರಿ ಪಕೀರ ಮೂಲ್ಯ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಕೆ, ಕಂದಾಯ ವಿಭಾಗದ ಸಿಬ್ಬಂದಿ ಪುರುಷೋತ್ತಮ್ ಹಾಗೂ ಸ್ವಚ್ಛತಾ ಮೇಲ್ವಿಚಾರಕ ಐತಪ್ಪ, ನಾಗೇಶ್ ದಾಳಿಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here