ಕೆಪಿಟಿಸಿಎಲ್ ನೌಕರರ ಸಂಘಕ್ಕೆ ಮೆಸ್ಕಾಂ ಪ್ರತಿನಿಧಿಗಳ ಆಯ್ಕೆಗೆ ಚುನಾವಣೆ- ಪುತ್ತು ಜೆ., ರವೀಂದ್ರ ಎಂ, ಕೆ.ಗೋವರ್ಧನ ಕಲ್ಲೇಗ ಗೆಲುವು

0

ಪುತ್ತೂರು: ಕರ್ನಾಟಕ ವಿದ್ಯುತ್ ಪ್ರಸರಣಾ ನಿಯಮಿತದ ನೌಕರರ ಸಂಘದ 22ನೇ ತ್ರೈವಾರ್ಷಿಕ ಮಹಾ ಅಧಿವೇಶನಕ್ಕೆ ಪುತ್ತೂರು ವಿಭಾಗದ ಮೆಸ್ಕಾಂನಿಂದ ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮೆಸ್ಕಾಂ ಬೆಟ್ಟಂಪಾಡಿ ಶಾಖೆಯ ಕಿರಿಯ ಇಂಜಿನಿಯರ್ ಪುತ್ತು ಜೆ., ಕುಂಬ್ರ ಶಾಖೆಯ ಕಿರಿಯ ಇಂಜಿನಿಯರ್ ರವೀಂದ್ರ ಎಂ. ಹಾಗೂ ಎಲ್.ಟಿ ರೇಟಿಂಗ್ ನ ಪವರ್ ಮೆನ್ ಕೆ.ಗೋವರ್ಧನ ಗೆಲುವು ಸಾಧಿಸಿದ್ದಾರೆ.


ಚುನಾವಣಾ ಪ್ರಕ್ರಿಯೆಗಳು ಮೇ.22ರಂದು ಮೆಸ್ಕಾಂ ಪುತ್ತೂರು ವಿಭಾಗದ ಕಚೇರಿಯಲ್ಲಿ ನಡೆಯಿತು. ಪುತ್ತೂರು ಪ್ರಾಥಮಿಕ ಸಮಿತಿಯ ಮೂರು ಮಂದಿ ಪ್ರತಿನಿಧಿಗಳ ಆಯ್ಕೆಗೆ ಪುತ್ತು ಜೆ., ರವೀಂದ್ರ ಎಂ., ಕೆ.ಗೋವರ್ಧನ ಕಲ್ಲೇಗ, ಗೀತಾ ಎಂ.ಕೆ., ಗೋಪಾಲಕೃಷ್ಣ ಬಸಪ್ಪ ಚವ್ಹಾಣ ಹಾಗೂ ಸಂಜೀವ ಗೌಡ ಸೇರಿದಂತೆ ಒಟ್ಟು ಆರು ಮಂದಿ ಕಣದಲ್ಲಿದ್ದರು. ಚುನಾವಣೆಯಲ್ಲಿ ಅತೀ ಹೆಚ್ಚು ಮತ ಪಡೆದ ಪುತ್ತು ಜೆ.(88 ಮತ), ರವೀಂದ್ರ ಎಂ(66 ಮತ) ಹಾಗೂ ಕೆ.ಗೋವರ್ಧನ(59 ಮತ)ರವರು ಗೆಲುವು ಸಾಧಿಸಿದ್ದಾರೆ.

ಮೆಸ್ಕಾಂನ ಪುತ್ತೂರು ವಿಭಾಗ, ಉಪ ವಿಭಾಗ, ನಗರ ಉಪ ವಿಭಾಗ, ಗ್ರಾಮಾಂತರ ಉಪ ವಿಭಾಗ, ಎಲ್.ಟಿ ರೇಟಿಂಗ್ ಹಾಗೂ ಡಿವಿಜನಲ್ ಸ್ಟೋರ್ ನ ಎಲ್ಲಾ ಸಿಬಂದಿಗಳು ಮತದಾರರಾಗಿದ್ದರು. ಪುತ್ತೂರು ವಿಭಾಗದ ಕಚೇರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಲಕ್ಷ್ಮೀ ಚುನಾವಣಾಧಿಕಾರಿಯಾಗಿದ್ದರು.


ಸಂಭ್ರಮಾಚರಣೆ;
ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳ ಪರವಾಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಿಜೇತರನ್ನು ಹೂ ಹಾರ ಹಾಕಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here