ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್‌ಶಿಪ್‌ನ ಭಾರತ ತಂಡಕ್ಕೆ ಧನ್ವಿತ್ ಆಯ್ಕೆ-ಪುತ್ತೂರಿಗೆ ಹೆಮ್ಮೆ ತಂದ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ

0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ದ್ವಿತೀಯ ಪಿಯು ವಿದ್ಯಾರ್ಥಿ ಧನ್ವಿತ್ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಯ (ಆರ್‌ಎಲ್‌ಎಸ್‌ಎಸ್)ವತಿಯಿಂದ ನಡೆಸಲ್ಪಟ್ಟ ಭಾರತ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.


ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್ ಶಿಪ್‌ನ ಆಯ್ಕೆ ಪ್ರಕ್ರಿಯೆಯು ವಿಶಾಖಪಟ್ಟಣದಲ್ಲಿ ಮೇ ತಿಂಗಳ 15ನೇ ತಾರೀಕಿನಿಂದ 19ನೇ ತಾರೀಖಿನ ತನಕ ನಡೆದಿತ್ತು. 200 ಮೀಟರ್ ಅಬ್ಸ್ಟೆಕಲ್, 200 ಮೀಟರ್ ಸೂಪರ್ ಲೈಫ್ ಸೇವರ್ ಹಾಗೂ 100 ಮೀ. ಮನಿಕಿನ್ ಕಾರಿಯಲ್ಲಿ ಹಾಗೂ ಒಂದು ಕಿಲೋಮೀಟರ್ ಬೀಚ್ ರನ್ನಿಂಗ್ ಇವುಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಧನ್ವಿತ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ತನ್ಮೂಲಕ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ನಲ್ಲಿ 2024ರ ಅಗೋಸ್ತು ತಿಂಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಸ್ಪರ್ಧಿಸಲಿದ್ದಾರೆ. ಧನ್ವಿತ್ ಅವರು ಪುತ್ತೂರು ದರ್ಬೆಯ ಶ್ರೀ ಕೇಶವಕುಮಾರ್ ಕೆ. ಹಾಗೂ ಮೀನಾಕ್ಷಿ ದಂಪತಿಯ ಪುತ್ರ ಹಾಗೂ ಪುತ್ತೂರಿನ ಬಾಲವನ ಈಜುಕೊಳದ ತರಬೇತುದಾರರಾದ ಪಾರ್ಥ ವಾರಣಾಸಿ, ರೋಹಿತ್ ಪಿ. ಹಾಗೂ ದೀಕ್ಷಿತ್ ಇವರ ಮಾರ್ಗದರ್ಶನದಲ್ಲಿ ತರಬೇತು ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here