ಶಿಬಾಜೆ: ಬೇಟೆಗಾರರ ತಂಡವನ್ನು ಬಂಧಿಸಿದ ಅರಣ್ಯಾಧಿಕಾರಿಗಳು

0

ಬೆಳ್ತಂಗಡಿ: ಕಾಡುಪ್ರಾಣಿಗಳ ಬೇಟೆಗೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಶಿಬಾಜೆ ಗ್ರಾಮದ ಪೆರ್ಲ- ಕಲ್ಲಾಜೆ ರಸ್ತೆಯ ಪತ್ತಿಮಾರ್ ಎಂಬಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ.

ಶಿಬಾಜೆ ಗ್ರಾಮದ ಕುರುಂಬು ಎಂಬಲ್ಲಿನ ಹರೀಶ್, ಸಕಲೇಶಪುರದ ಕೌಡಳ್ಳಿಯ ಶಿವಕುಮಾರ್, ಶಿಬಾಜೆಯ ಪತ್ತಿಮಾರ್‌ನ ಪದ್ಮನಾಭ ಬಂಧಿತರು. ಆರೋಪಿಗಳಿಂದ ಒಂದು ಸಿಂಗಲ್‌ ಬ್ಯಾರೆಲ್ ಬಂದೂಕು, ಮಾರುತಿ ಆಮ್ನಿ ಕಾರು ವಶಕ್ಕೆ ಪಡೆಯಲಾಗಿದೆ. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಾಜೇಶ್, ಅವಿನಾಶ್, ಶಿವಕುಮಾರ್ ಹೊಸ್ಮನಿ, ರವೀಂದ್ರ, ಬೀಟ್ ಫಾರೆಸ್ಟರ್ ನಿಂಗಪ್ಪ ಅವರಿ ಮತ್ತು ಚಾಲಕ ಕಿಶೋರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here